ಬಿರ್ಸಾ ಮುಂಡಾ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯ

ಆದಿವಾಸಿ ಜನಾಂಗದ ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಹರಣಶಿಕಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪದಾಽಕಾರಿಗಳು ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು.
ಆದಿವಾಸಿ ಜನಾಂಗದ ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಹರಣಶಿಕಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪದಾಽಕಾರಿಗಳು ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು.
Published on
ವಿಜಯವಾಣಿ ಸುದ್ದಿಜಾಲ, ವಿಜಯಪುರ
ಆದಿವಾಸಿ ಜನಾಂಗದ ನಾಯಕ, ಸ್ವಾತಂತ್ರ‍್ಯ ಹೋರಾಟ ಬಿರ್ಸಾ ಮುಂಡಾ ಅವರ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಹರಣಶಿಕಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಮುಖಂಡ ಕೃಷ್ಣಾ ರಾಠೋಡ ಮಾತನಾಡಿ, ಆದಿವಾಸಿ ಜನಾಂಗದ ನಾಯಕ ಬಿರ್ಸಾ ಮುಂಡಾ ಒಬ್ಬ ಸ್ವಾತಂತ್ರ‍್ಯ ಹೋತರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು. ೧೯ನೇ ಶತಮಾನದ ಅಂತ್ಯದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಬಂಗಾಳ ಪ್ರೆಸಿಡೆನ್ಸಿಯಲ್ಲಿ ಜಾರ್ಖಂಡನಲ್ಲಿ ಹುಟ್ಟಿಕೊಂಡ ಬುಡಕಟ್ಟು ಧಾರ್ಮಿಕ ಸಹಸ್ರಮಾನದ ಚಳುವಳಿ ಮುನ್ನಡೆಸಿದರು. ಅದರಿಂದಾಗಿ ಅವರನ್ನು ಭಾರತೀಯ ಸ್ವಾತಂತ್ರ‍್ಯ ಚಳವಳಿಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಮುಖಂಡ ಚಂದ್ರು ತಾರನಾಳ ಮಾತನಾಡಿ, ಬಿರ್ಸಾ ಮುಂಡಾ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿ ಕೇವಲ ೨೫ನೇ ವಯಸ್ಸಿನಲ್ಲಿಯೇ ತನ್ನ ಪ್ರಾಣವನ್ನು ದೇಶಕ್ಕೆ ಅರ್ಪಿಸಿದ್ದರು. ಅಂತಹ ಮಹನೀಯರ ಪ್ರತಿಮೆಯನ್ನು ಸ್ಟೇಷನ್ ರಸ್ತೆಲ್ಲಿರುವ ಹರನಶಿಕಾರಿ ಒಣಿಗೆ ಹೋಗುವ ದ್ವಾರ ಬಾಗಿಲ ಬಳಿ ನಿರ್ಮಿಸುವಂತೆ ಆಗ್ರಹಿಸಿದರು.
ಮುಖಂಡ ವಿನೋದ ಕೋಟಿಹಾಳ, ನಾಮದೇವ ಚವಾಣ್, ಅರುಣ ಕಾಳೆ, ರಾಜು ಕಾಳೆ, ನಾರಾಯಣ ರಾಠೋಡ, ರಾಜು ಚವಾಣ್, ರವಿ ಕಾಳೆ, ಆನಂದ ಚವಾಣ್, ಇಜಾಜ್ ಮುಕಬಿಲ್, ವಿಜು ಚವಾಣ್, ಜಗದೀಶ ಕಾಳೆ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net