ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ

ಇಂಡಿ ತಾಲೂಕಿನ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದಿಂದ ವಿವಿಧ ಬೇಡಿಕೆ ಆಗ್ರಹಿಸಿ ಆಡಳಿತಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ದಾನಮ್ಮ ಹೂಗಾರ, ರಜನಿ ಬನಸೋಡೆ, ಕಲಾವತಿ ಕಾಳೆ, ಯಲ್ಲಮ್ಮ ಮದಭಾವಿ, ಶಾರದಾ ಬಿರಾದಾರ ಮತ್ತಿತರರಿದ್ದಾರೆ.

Published on
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ
ತಾಲೂಕಿನ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಆಡಳಿತಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಿ.ಎಸ್ ಕಡಕಬಾವಿಗೆ ಮನವಿ ಸಲ್ಲಿಸಲಾಯಿತು.
ನೌಕರರ ಸಂಘದ ಅಧ್ಯಕ್ಷೆ ದಾನಮ್ಮ ಹೂಗಾರ ಮಾತನಾಡಿ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಹಾಗೂ ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತೆಗಾರರು, ಕಾವಲುಗಾರರು, ಜವಾನರು, ನರ್ಸ್ಗಳು, ಡಾಟಾ ಎಂಟ್ರಿ ಆಪರೇಟರ್‌ಗಳು ಸುಮಾರು ೧೫ ವರ್ಷದಿಂದ ೨೦ ವರ್ಷಗಳವರೆಗೆ ಕೆಲಸ ಮಾಡುತ್ತಿದ್ದಾರೆ.
ಅವರಿಗೆ ಕನಿಷ್ಠ ವೇತನ ಜಾರಿ ಆಗಬೇಕು, ಎಲ್ಲಾ ಹೊರಗುತ್ತಿಗೆ ನೌಕರರಿಗೂ ಸೇವಾ ಭದ್ರತೆ ನೀಡಿ ಖಾಯಂ ಮಾಡಬೇಕು. ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಹಾಸ್ಟೆಲ್ ನೌಕರರಿಗೆ ರಜೆ ಸಹಿತ ವೇತನ ನೀಡಬೇಕು ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ರಜನಿ ಬನಸೋಡೆ, ಕಲಾವತಿ ಕಾಳೆ, ಯಲ್ಲಮ್ಮ ಮದಭಾವಿ, ಶಾರದಾ ಬಿರಾದಾರ, ಪ್ರೇಮಾವತಿ ಬಜಂತ್ರಿ, ರೇಣುಕಾ ಬಾರಾಸೆ, ಶಶಿಕಲಾ ಕಮತಿ, ಗಿರಿಜಾ ಮದಭಾವಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net