ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ -Éಡರೇಶನ್ (ಸಿಐಟಿಯು ಸಂಯೋಜಿತ ) ವತಿಯಿಂದ ವಿಜಯಪುರದಲ್ಲಿ ಕಾರ್ಮಿಕ ಕಚೇರಿಗೆ ಮನವಿ ಸಲ್ಲಿಸಲಾಯಿತು. ಈರಣ್ಣ ಬೆಳ್ಳುಂಡಗಿ, ಲಕ್ಷ÷್ಮಣ ಹಂದ್ರಾಳ, ಸುರೇಶ ಜೀಬಿ ಮತ್ತಿತರರಿದ್ದಾರೆ.
ವಿಜಯಪುರ: ಕಾರ್ಮಿಕ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ -ೆಡರೇಶನ್ (ಸಿಐಟಿಯು ಸಂಯೋಜಿತ ) ವತಿಯಿಂದ ಗುರುವಾರ ಕಾರ್ಮಿಕ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಈರಣ್ಣ ಬೆಳ್ಳುಂಡಗಿ ಮಾತನಾಡಿ, ನೈಜ ಕಾರ್ಮಿಕರು ಕಾರ್ಮಿಕ ಕಾಯ್ದೆಗೆ ಸಲ್ಲಿಸಿದ ಅರ್ಜಿಗಳನ್ನು ಕ್ಷುಲ್ಲಕ ಕಾರಣಕ್ಕೆ ತಿರಸ್ಕರಿಸಲಾಗುತ್ತಿದೆ, ಕಾರ್ಮಿಕ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ಕಾರ್ಮಿಕ ಕಚೇರಿಯಿಂದ ಯಾವುದೇ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ, ಕಟ್ಟಡ ಕಾರ್ಮಿಕರ ನೈಜತೆಯನ್ನು ಪರೀಕ್ಷಿಸುವಾಗ ಸಣ್ಣ ಸಣ್ಣ ಕಾರಣಗಳನ್ನೇ ನೆಪ ಮಾಡಿ ನೈಜ ಕಾರ್ಮಿಕರ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತಿದ್ದು, ಕಾರ್ಮಿಕರ ಕೆಲಸವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡುವ ಜತೆಗೆ ಮಾಡುತ್ತಿರುವ ಕೆಲಸವನ್ನು ಖಾತ್ರಿಪಡಿಸಿಕೊಂಡು ನಂತರ ಕಾರ್ಡ್ ಅನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಿಐಟಿಯುನ ಜಿಲ್ಲಾ ಸಂಚಾಲಕ ಲಕ್ಷ÷್ಮಣ ಹಂದ್ರಾಳ ಮಾತನಾಡಿ, ದೇಶದಲ್ಲಿ ನಾಲ್ಕು ಕಾರ್ಮಿಕ ವಿರೋಽ ಕಾನೂನುಗಳನ್ನು ತಂದು ಕಟ್ಟಡ ಕಾರ್ಮಿಕರಿಗೆ ಯಾವ ರೀತಿ ತೊಂದರೆಯಾಗುತ್ತಿದೆ ಎಂಬುದನ್ನು ವಿವರಿಸಿದರು.
ಸಿಐಟಿಯು ಸಹ ಸಂಚಾಲಕ ಸುರೇಶ ಜೀಬಿ ಮತ್ತು ಕಾರ್ಮಿಕ ಸಂಘಟನೆಯ ಹಿರಿಯ ಮುಖಂಡ ಸಂಗಪ್ಪ ಕಪಾಲಿ ಮಾತನಾಡಿದರು.
ಮನವಿ ಸ್ವೀಕರಿಸಿದ ಕಾರ್ಮಿಕ ಅಽಕಾರಿಗಳು, ಕಾರ್ಮಿಕರ ಬೇಡಿಕೆಗಳನ್ನು ಆಲಿಸಿ ಮತ್ತು ಅವುಗಳಿಗೆ ಸೂಕ್ತವಾದ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.