ಯುಜಿಸಿ ನಿಯಮಾವಳಿ ಯಥಾವತ್ತಾಗಿ ಜಾರಿಗೆ ಆಗ್ರಹ, ಡಿಎಸ್‌ಎಸ್‌ನಿಂದ ಬೃಹತ್ ಪ್ರತಿಭಟನೆ, ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ

ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ. ಸಾಗರ ಬಣ) ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ರಮೇಶ ಧರಣಾಕರ, ಮಹಾಂತೇಶ ಸಾಸಬಾಳ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ. ಸಾಗರ ಬಣ) ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ರಮೇಶ ಧರಣಾಕರ, ಮಹಾಂತೇಶ ಸಾಸಬಾಳ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಯುಜಿಸಿ ನಿಯಮಾವಳಿ ಯಥಾವತ್ತಾಗಿ ಜಾರಿಗೆ ಆಗ್ರಹ
  • ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಸಮಾನತೆ ಅಗತ್ಯ
  • ಜಾತಿ, ಲಿಂಗ, ವರ್ಗ ತರಾತಮ್ಯ ಹೋಗಲಾಡಿಸಿ
ವಿಜಯಪುರ: ಕೇಂದ್ರ ಸರ್ಕಾರದ ಧನ ಸಹಾಯ ಆಯೋಗ (ಯುಜಿಸಿ) ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಸಮಾನತೆ ಪ್ರೋತ್ಸಾಹಿಸಲು ತಂದಿರುವ ನಿಯಮಾವಳಿಗಳನ್ನು ಕೂಡಲೇ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ. ಸಾಗರ ಬಣ) ಯಿಂದ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ಸಂವಿಧಾನ ಸಮಾನ ಹಕ್ಕುಗಳನ್ನು ನೀಡಿದೆ. ಎಲ್ಲ ಸಮುದಾಗಳಿಗೆ ಶಿಕ್ಷಣದ ಸೌಲಭ್ಯ ಕಲ್ಪಿಸಿದೆ. ಆದರೆ, ಇಂದಿಗೂ ಜಾತಿ, ಲಿಂಗ ಮತ್ತು ವರ್ಗ ತರಾತಮ್ಯ ಮುಂದುವರಿದೇ ಇದೆ. ಕೆಲವು ಜಾತಿವಾದಿ, ಕೋಮುವಾದಿ ಹಿನ್ನೆಲೆಯ ಕುಲಪತಿಗಳು, ಕುಲಸಚಿವರು, ಪ್ರಾಧ್ಯಾಪಕರು ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡುವುದರ ಮುಖೇನವಾಗಿ ಸಾಂಸ್ಥಿಕ ಹತ್ಯೆಗಳನ್ನು ಮಾಡಿರುವಂತದ್ದು ಬೆಳಕಿಗೆ ಬರುತ್ತಿದೆ ಎಂದರು.
2016 ರಲ್ಲಿ ಹೈದ್ರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿ ‘ರೋಹಿತ್ ವೇಮುಲ’, 2019 ರಲ್ಲಿ ಮುಂಬೈನ ವೈದ್ಯಕೀಯ ವಿದ್ಯಾರ್ಥಿನಿ ’ಪಾಯಲ್’, 2013 ರಲ್ಲಿ ಬಾಂಬೆ ವಿದ್ಯಾರ್ಥಿ ‘ದರ್ಶನ್ ಸೊಳಂಕಿ...’ ಹೀಗೆ ಅನೇಕರು ಇಂಥ ಸಾಂಸ್ಥಿಕ ಹತ್ಯೆಗೆ ಒಳಗಾಗಿದ್ದಾರೆ. ಈವರೆಗಿನ ದಲಿತ ಮತ್ತು ಬುಡಕಟ್ಟು, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆಯನ್ನು ಗಮನಿಸಿದರೆ ಆಶ್ವರ್ಯವಾಗುತ್ತೆ. 2007 ರಿಂದ 2011 ರ ಅಂದರೆ ಈ ನಾಲ್ಕು ವರ್ಷಗಳಲ್ಲಿಯೇ 20 ದಲಿತ ವಿದ್ಯಾರ್ಥಿಗಳು ಜಾತಿ ದೌರ್ಜನ್ಯದ ಕಾರಣಕ್ಕಾಗಿಯೇ ಆತ್ಮಹತ್ಯೆ (ಸಾಂಸ್ಥಿಕ ಹತ್ಯೆ) ಮಾಡಿಕೊಂಡಿದ್ದಾರೆ ಎಂದರು.
ಕೇಂದ್ರ ಸರ್ಕಾರವೇ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ಅಂಕಿ-ಅಂಶಗಳ ಪ್ರಕಾರ ಐಐಟಿ, ಐಐಎಂ,ಎನ್‌ಐಟಿ, ಶಿಕ್ಷಣ ಸಂಸ್ಕೃತಗಳಲ್ಲಿ 112 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸರ್ಕಾರದ ಅಧಿಕೃತ ಮಾಹಿತಿ. ಇಂತಹ ಸಂಗತಿಗಳನ್ನು ಕೇಂದ್ರವಾಗಿ ಇಟ್ಟುಕೊಂಡೆ 2012 ರ ಯುಜಿಸಿ ಕರುಡು ನಿಯಮದಲ್ಲಿ ಜಾತಿ ದೌರ್ಜನ್ಯ ತಡೆಯುವ ನಿಯಮಾವಳಿಗಳು ಇದ್ದವು. ಆದರೆ ವೇಮುಲ್ ಮತ್ತು ಪಾಯಲ್ ಪೋಷಕರು ಸುಪ್ರೀಂ ಮೊರೆಹೋದ ಕಾರಣ, ಅವರ ವಾದವನ್ನು ಆಲಿಸಿದ ಕೋರ್ಟ್ ಯುಜಿಸಿಗೆ ಮತ್ತೊಮ್ಮೆ ನಿಯಮ ಪರಿಶೀಲಿಸಿ ಜಾತಿ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿತರುವಂತೆ ಆದೇಶಿಸಿತು. ಇದರ ಭಾಗವಾಗಿಯೇ ಇವತ್ತೀನ ಈ ‘2016 ರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ’ ಪರಿಶಿಷ್ಟ ಕಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಉದ್ದೇಶಿಸಿದ ಕರಡು ನಿಯಮವಾಗಿದೆ ಎಂದರು.
ಮುಖಂಡರಾದ ರಮೇಶ ಧರಣಾಕರ, ಮಹಾಂತೇಶ ಸಾಸಬಾಳ, ಸಂತೋಷ ಮಣಗಿರಿ, ಅರುಣ್ ಗವಾರಿ. ಗೋಪಾಲ್ ಪೂಜಾರಿ, ಪರಶುರಾಮ ಇಂಗಳಗೇರಿ, ಅವಿನಾಶ ಬಾನಿಕೋಲ, ದೊಡ್ಡಪ್ಪ ನಾಟಿಕಾರ, ಮಹಾಂತೇಶ ಚಲವಾದಿ, ಸಿದ್ದಾರ್ಥ ರೂಗಿ, ಬಾಬು ಗುಡಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net