ಕೊಳಗೇರಿ ನಿವಾಸಿಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಲಿತ ಸ್ವರಾಜ್ಯ ಸೇನೆ ಮತ್ತು ಕರ್ನಾಟಕ ಸಂಘಟನೆ ಪದಾಽಕಾರಿಗಳು ವಿಜಯಪುರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗೌಡಪ್ಪ ಬಡಿಗೇರ, ಅಕ್ಷಯ ಕುಮಾರ, ಅಮೃತ ಮತ್ತಿತರರಿದ್ದಾರೆ.
ವಿಜಯಪುರ: ಕೊಳಗೇರಿ ನಿವಾಸಿಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಲಿತ ಸ್ವರಾಜ್ಯ ಸೇನೆ ಮತ್ತು ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಇತ್ತೀಚೆಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಂಘಟನೆ ಅಧ್ಯಕ್ಷ ಗೌಡಪ್ಪ ಬಡಿಗೇರ ಮಾತನಾಡಿ, ಮಂಡಳಿಯು ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳಾವುದಕ್ಕೂ ಸ್ಪಂದಿಸುತ್ತಿಲ್ಲ. ಬೇಸಿಗೆ ಇರುವುದರಿಂದ ವಿವಿಧ ಸ್ಲಂಗಳ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಕಣಕಿ ಬಜಾರ್, ಕುಂಬಾರ ಗಲ್ಲಿ ಪ್ರದೇಶಗಳು ಮನುಷ್ಯ ವಾಸಕ್ಕೆ ಯೋಗ್ಯವಾಗಿಲ್ಲ. ಅವುಗಳನ್ನು ಕೂಡಲೇ ಸ್ಥಳಾಂತರಿಸಬೇಕು.
ಈಗಾಗಲೇ, ತಯಾರಿಸಿದ ಕಾಟಾಚಾರದ ನಡಾವಳಿಯನ್ನು ಪುನರ್ ತಯಾರಿಸಿ ಅದರಂತೆ ಕಾರ್ಯನಿರ್ವಹಿಸಬೇಕು. ಹರಣ ಶಿಕಾರಿ ಸ್ಲಂ, ಭಾರತ ನಗರ, ಶಿಖಾರಖಾನೆ, ಮದ್ದಿನ ಕಣಿ ಸ್ಲಂಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.