ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ

ಬಸವನಬಾಗೇವಾಡಿ ಪಟ್ಟಣದಲ್ಲಿ ಜನಸಾಮಾನ್ಯರ ವೇದಿಕೆಯ ಸಂಘಟನೆ ಕಾರ್ಯಕರ್ತರು ಯುವ ಅಧಿವೇಶನವನ್ನು ನಡೆಸಿ ಸಿಎಂಗೆ ಬರೆದ ಮನವಿಯನ್ನು ಶಿರಸ್ತೇದಾರರಿಗೆ ಸಲ್ಲಿಸಿದರು. ಬಸವರಾಜ ಕೋಲಕಾರ, ಮಾಂತೇಶ ಮ್ಯಾಗೇರಿ, ಸೀತಪ್ಪ ಗಣಿ, ಸುನೀಲ ತಳೆವಾಡ ಮತ್ತಿತರರಿದ್ದರು.
ಬಸವನಬಾಗೇವಾಡಿ ಪಟ್ಟಣದಲ್ಲಿ ಜನಸಾಮಾನ್ಯರ ವೇದಿಕೆಯ ಸಂಘಟನೆ ಕಾರ್ಯಕರ್ತರು ಯುವ ಅಧಿವೇಶನವನ್ನು ನಡೆಸಿ ಸಿಎಂಗೆ ಬರೆದ ಮನವಿಯನ್ನು ಶಿರಸ್ತೇದಾರರಿಗೆ ಸಲ್ಲಿಸಿದರು. ಬಸವರಾಜ ಕೋಲಕಾರ, ಮಾಂತೇಶ ಮ್ಯಾಗೇರಿ, ಸೀತಪ್ಪ ಗಣಿ, ಸುನೀಲ ತಳೆವಾಡ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನಸಾಮಾನ್ಯರ ವೇದಿಕೆ
  • ಕಾರ್ಯಕರ್ತರಿಂದ ಪ್ರತಿಭಟನೆ
ಬಸವನಬಾಗೇವಾಡಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿನ ಖಾಲಿ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಬೇಕು ಎಂದು ಆಗ್ರಹಿಸಿ ಪಟ್ಟಣದ ತಾಳಿಕೋಟೆ ರಸ್ತೆಯ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿ ಎದುರು ಉದ್ಯೋಗಾಕಾಂಕ್ಷಿ ಯುವಕರು ಹಾಗೂ ಜನಸಾಮಾನ್ಯರ ವೇದಿಕೆಯ ಸಂಘಟನೆ ಕಾರ್ಯಕರ್ತರು ಯುವ ಅಧಿವೇಶನ ನಡೆಸಿದರು.
ಮಂಗಳವಾರ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಕರು ಹಾಗೂ ಚಿಂತಕರು ಅಧಿವೇಶನದಲ್ಲಿ ಭಾಗವಹಿಸಿ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ, ಖಾಲಿ ಹುದ್ದೆಗಳ ಹೆಚ್ಚಳ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿನ ಅಸಮರ್ಪಕತೆ ಕುರಿತು ತೀವ್ರ ಚರ್ಚೆ ನಡೆಸಿದರು. ಬಳಿಕ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು  ಸಲ್ಲಿಸಿದರು.
ಕೆಪಿಎಸ್ಸಿ, ಕೆಇಎ, ಕೆಎಸ್‌ಪಿ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ನೇಮಕಾತಿ ನಡೆಸುವ ಎಲ್ಲಾ ಪ್ರಾಧಿಕಾರಗಳು ಪ್ರತಿವರ್ಷ ಖಾಲಿ ಹುದ್ದೆಗಳ ವಿವರ ಹಾಗೂ ಪರೀಕ್ಷಾ ದಿನಾಂಕ ಒಳಗೊಂಡ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಿ ನಿಗದಿತ ವೇಳೆಯಂತೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಕೇಂದ್ರ ಮಟ್ಟದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸುವಂತೆ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಅಕ್ರಮಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು. ಜತೆಗೆ ಉದ್ಯೋಗಾಕಾಂಕ್ಷಿಗಳಿಗೆ ಹೊರೆಯಾಗುತ್ತಿರುವ ದುಬಾರಿ ಅರ್ಜಿ ಶುಲ್ಕವನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯೂ ಅಧಿವೇಶನದಲ್ಲಿ ಮುಂದಿಡಲಾಯಿತು.
ಬಸವರಾಜ ಕೋಲಕಾರ, ಮಾಂತೇಶ ಮ್ಯಾಗೇರಿ, ಸೀತಪ್ಪ ಗಣಿ, ಸುನೀಲ ತಳೆವಾಡ, ಶರಣಗೌಡ ಕೊಂಡಗೂಳಿ,ಮಲ್ಲು ತಳೆವಾಡ, ಸುಭಾಸ್ ಬುದಗೋಳಿ, ಗುರುನಾಥ ದಳವಾಯಿ, ಮೌನೇಶ ಕುರಿ, ಸಂತೋಷ ಪೂಜಾರಿ, ಶಿವರಾಜ ಕುರಾಡಿ, ಸಂತೋಷ ಹಿರೇಕುರುಬರ, ಶಿರಸ್ತೇದಾರ ಮೂಲಕ ಮುಖ್ಯಮಂತ್ರಿಗೆ ಕಳುಹಿಸುವಂತೆ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net