ಜಿಲ್ಲೆಯ ಸಮಗ್ರ ಅಭಿವೃದ್ಧಿ ಒತ್ತಾಯ

ಜಿ¯್ಲÉಯ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನಾ ಸಮಿತಿಯ ಪದಾಽಕಾರಿಗಳು ವಿಜಯಪುರದಲ್ಲಿ ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಸಲ್ಲಿಸಿದರು. ಜಗದೇವ ಸೂರ್ಯವಂಶಿ, ಚಂದ್ರ ಪಡೆಗನ್ನವರ, ಎಂ.ಆರ್. ಗುರಿಕಾರ ಮತ್ತಿತರರಿದ್ದಾಋಎ.
ಜಿ¯್ಲÉಯ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನಾ ಸಮಿತಿಯ ಪದಾಽಕಾರಿಗಳು ವಿಜಯಪುರದಲ್ಲಿ ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಸಲ್ಲಿಸಿದರು. ಜಗದೇವ ಸೂರ್ಯವಂಶಿ, ಚಂದ್ರ ಪಡೆಗನ್ನವರ, ಎಂ.ಆರ್. ಗುರಿಕಾರ ಮತ್ತಿತರರಿದ್ದಾಋಎ.
Published on
ವಿಜಯಪುರ: ಜಿ¯್ಲÉಯ ಸಮಗ್ರ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಸುಧಾರಣೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನಾ ಸಮಿತಿಯ ಪದಾಽಕಾರಿಗಳು ಸಚಿವ ಎಂ.ಬಿ. ಪಾಟೀಲರಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರ ಜಿಲ್ಲಾಽಕಾರಿ ಡಾ. ಆನಂದ ಕೆ. ಅವರಿಗೆ ಸಲ್ಲಿಸಿದರು.
ಜಿ¯್ಲÉಯ ಸಾರ್ವಜನಿಕರಿಗೆ ಆರೋಗ್ಯ, ಶಿಕ್ಷಣ, ರಸ್ತೆ, ಒಳಚರಂಡಿ, ಪರಿಸರ ಸಂರಕ್ಷಣೆ, ತುರ್ತು ಸೇವೆಗಳು, ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ ಹಾಗೂ ಕೃಷಿ ಉಪಕರಣಗಳು ಸೇರಿ ಮೂಲ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ದೊರೆಯುವಂತೆ ಮತ್ತು ಪ್ರತಿ ತಿಂಗಳು ಜಿ¯್ಲÁ ಮಟ್ಟದ ಅಽಕಾರಿಗಳ ಸಭೆ ನಡೆಸಿ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೆ, ಬಾಗಲಕೋಟೆ ರಸ್ತೆ ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸುವುದು, ಚಡಚಣ ಸೇರಿ ಜಿ¯್ಲÉಯ ವಿವಿಧ ಭಾಗಗಳಲ್ಲಿ ಅಪರಾಧ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ಇಲ್ಲಿನ ಐತಿಹಾಸಿಕ ಆದಿಲ್‌ಶಾಹಿ ಕೋಟೆ ಹಾಗೂ ಕಂದಕಗಳ ಸಂರಕ್ಷಣೆ ಮತ್ತು ಸೌಂದರ್ಯೀಕರಣ, ಶಿಕ್ಷಣ ಇಲಾಖೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವುದು ಸೇರಿ ಪ್ರಮುಖ ವಿಷಯಗಳನ್ನು ಈಡೇರಿಸಲು ಮನವಿ ಸಲ್ಲಿಸಲಾಗಿದೆ.
ಸಮಿತಿಯ ಸಂಸ್ಥಾಪಕ, ರಾಜ್ಯಾಧ್ಯಕ್ಷ ಜಗದೇವ ಸೂರ್ಯವಂಶಿ, ಉಪಾಧ್ಯಕ್ಷ ಈಶ್ವರ ಚಂದ್ರ ಪಡೆಗನ್ನವರ, ಪದಾಽಕಾರಿಗಳಾದ ಎಂ.ಆರ್. ಗುರಿಕಾರ, ಮೈಲಾರಪ್ಪ ಸೌದಾಗರ, ರಾಜಕುಮಾರ ಉಪ್ಪಾರ, ವಿಠಲ ಕರಿಗಾರ, ಉಮೇಶ ದೊಡ್ಮನಿ, ಪರಶುರಾಮ ತೊರ್ವಿ, ಶಂಕರ ಸಾತಪೋತೆ, ಚಿದಾನಂದ ಅವಟಿ, ಪಾಂಡು ಮಹಲï, ಜಗದೀಶ ದೊಡ್ಡಮನಿ, ಸುರೇಶ ನಿನ್ನೆ, ಕಿರಣ ಮೇಲಿನಕೇರಿ, ಅಪ್ಪು ಬೂತನಾಳ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net