ಬರ ಘೋಷಿಸಿ ಪರಿಹಾರ ಒದಗಿಸಿ

ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಽಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಅನಮೇಶ ಜಮಖಂಡಿ, ರಾಮನಗೌಡ ಪಾಟೀಲ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಽಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಅನಮೇಶ ಜಮಖಂಡಿ, ರಾಮನಗೌಡ ಪಾಟೀಲ ಇತರರಿದ್ದಾರೆ.
Published on
ವಿಜಯಪುರ: ಜಿಲ್ಲೆಯ 13 ತಾಲೂಕುಗಳನ್ನು ಸಂಪೂರ್ಣ ಬರ ಎಂದು ಘೋಷಿಸಿ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ಒದಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಽಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ ಅತೀ ಹೆಚ್ಚು ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದ ಸಾಕಷ್ಟು ನಷ್ಟಗೊಂಡರೆ ಈ ವರ್ಷ ಒಟ್ಟಾರೆಯಾಗಿ 13 ತಾಲೂಕಿನ ಯಾವ ಗ್ರಾಮಗಳಲ್ಲಿ ಬಿತ್ತನೆ ಮಾಡುವಷ್ಟು ಮಳೆ ಆಗಿಲ್ಲ. ಆದ್ದರಿಂದ ಕೂಡಲೇ ಬರ ಘೋಷಿಸಿ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಅನಮೇಶ ಜಮಖಂಡಿ, ಮುಖಂಡರಾದ ರಾಮನಗೌಡ ಪಾಟೀಲ, ಸಂಗಪ್ಪ ಟಕ್ಕೆ, ಮಹಾದೇವ ಬನಸೋಡೆ, ರಾಮಸಿಂಗ ರಜಪೂತ, ಬಸಗೊಂಡ ತೇಲಿ, ಗೋರಕನಾಥ ಗೇರಡೆ, ಸುಭಾಸ ಹಿಟ್ನಳ್ಳಿ, ಶಟ್ಟು ಜಾಧವ, ಪ್ರಕಾಶ ವಂಬಾಸೆ, ಮುದಕಣ್ಣ ಯಂಕAಚಿ, ರಾಘವೇಂದ್ರ ಗೇರಡೆ, ಮೃತ್ಯುಂಜಯ ನುಚ್ಚಿ, ಬಸವರಾಜ ಉಕ್ಕಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net