ಜಮಖಂಡಿ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದಿಂದ ಬರುವ ವಾಹನಗಳು ವಲ್ಲಬಬಾಯಿ ಸರ್ಕಲ್ - ನವಭಾಗ ಕ್ರಾಸ್ - ಬಬಲೇಶ್ವರ ನಾಕಾ -ಗುಂಡಬಾವಡಿ ಕ್ರಾಸ್ - ತಾಜ್‌ಬಾವಡಿ- ಜೋಡ ಗುಮ್ಮಟ - ಕೇಂದ್ರ ಬಸ್ ನಿಲ್ದಾಣದವರೆಗೆ, ಕೋಲ್ಹಾರ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು, ಕೋಲ್ಹಾರ ರೈಲ್ವೇ ಗೇಟ್ - ವಿಶ್ವೇಶ್ವರ ಸರ್ಕಲ್ - ರಾಮನಗರ - ವಲ್ಲಬಬಾಯಿ ಸರ್ಕಲ್ - ನವಭಾಗ ಕ್ರಾಸ್ - ಬಬಲೇಶ್ವರ ನಾಕಾ - ಗುಂಡಬಾವಡಿ ಕ್ರಾಸ್ - ತಾಜ್‌ಬಾವಡಿ - ಜೋಡ ಗುಮ್ಮಟ - ಕೇಂದ್ರ ಬಸ್ ನಿಲ್ದಾಣದವರೆಗೆ, ಅಥಣಿ ಕಡೆಯಿಂದ ಸೆಟ್‌ಲೈಟ್ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು, ಇಟಗಿ ಪೆಟ್ರೋಲ್ ಪಂಪ್ - ರಿಂಗ್ ರಸ್ತೆ ಇಟ್ಟಂಗಿಹಾಳ ಕ್ರಾಸ್, ದರ್ಗಾ ಜೈಲ್ ಕ್ರಾಸ್ - ಶಾಸ್ತ್ರಿ ನಗರ ಕ್ರಾಸ್ - ಗ್ಯಾಂಗ್‌ಬಾವಡಿ - ಸೆಟ್‌ಲೈಟ್ ಬಸ್ ನಿಲ್ದಾಣದವರೆಗೆ ಮಾರ್ಗ ಬದಲಿಸಲಾಗಿದೆ. ಸೋಲಾಪುರ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು ಸೋಲಾಪುರ ಬೈಪಾಸ್ - ಇಂಡಿ ಬೈಪಾಸ್ - ಸಿಂದಗಿ ಬೈಪಾಸ್ - ಮನಗೂಳಿ ಬೈಪಾಸ್ - ಜಲನಗರ - ಕೋರ್ಟ್ ಕ್ರಾಸ್ - ಬಾಗಲಕೋಟ ಕ್ರಾಸ್ ಮೂಲಕ ಕೇಂದ್ರ ಬಸ್ ನಿಲ್ದಾಣದವರೆಗೆ, ಸೋಲಾಪುರದಿಂದ ಸೆಟ್‌ಲೈಟ್ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳು, ಸೋಲಾಪುರ ಬೈಪಾಸ್ - ಬಿಎಂ ಪಾಟೀಲ್ ಸರ್ಕಲ್ - ರಿಂಗ್ ರಸ್ತೆ ಇಟ್ಟಂಗಿಹಾಳ ಕ್ರಾಸ್ - ದರ್ಗಾ ಜೈಲ್ ಕ್ರಾಸ್ - ಶಾಸ್ತ್ರಿ ನಗರ ಕ್ರಾಸ್ - ಗ್ಯಾಂಗ್‌ಬಾವಡಿ ಮೂಲಕ ಸೆಟ್‌ಲೈಟ್ ಬಸ್ ನಿಲ್ದಾಣದವರೆಗೆ, ಸಿಂದಗಿ ನಾಕಾದ ಮೂಲಕ ನಗರಕ್ಕೆ ಬರುವ ವಾಹನಗಳನ್ನು ಮನಗೂಳಿ ಕಡೆಗೆ ತಿರುಗಿಸಿಕೊಂಡು ಸದರಿ ವಾಹನಗಳು ಮನಗೂಳಿ ಬೈಪಾಸ್, ಜಲನಗರ ಕೋರ್ಟ್ ಕ್ರಾಸ್ - ಬಾಗಲಕೋಟ ಕ್ರಾಸ್ - ಬಸ್‌ಸ್ಟ್ಯಾಂಡಗೆ ಬರಬಹುದು ಅಥವಾ ಜಲನಗರ - ಮನಗೂಳಿ ಅಗಸಿ - ಅಷ್ಟಫೈಲ್ ಬಂಗಲಾ ಮೂಲಕ ಬಸ್‌ಸ್ಟಾೃಂಡ ಮಾರ್ಗದಲ್ಲಿಯೂ ಬರಬಹುದಾಗಿದೆ.