ಗೂಂಡಾ ಕಾಯ್ದೆಯಡಿ ಮಡುಸ್ವಾಮಿ ಬಂಧನಕ್ಕೆ ಡಿಸಿ ಆದೇಶ, ಶಾಂತಿ-ಸುವ್ಯವಸ್ಥೆ ಕಾಪಾಡಲು ದಿಟ್ಟ ನಿರ್ಧಾರ

ಮಡಿವಾಳಯ್ಯ ಊರ್ಫ್ ಮಡುಸ್ವಾಮಿ ಪಂಚಯ್ಯ ಹಿರೇಮಠ
ಮಡಿವಾಳಯ್ಯ ಊರ್ಫ್ ಮಡುಸ್ವಾಮಿ ಪಂಚಯ್ಯ ಹಿರೇಮಠ
Published on

ಪ್ರಮುಖ ಮುಖ್ಯಾಂಶಗಳು

  • ಅಪರಾಧ ಚಟುವಟಿಕೆಗಳಲ್ಲಿ ಭಾಗಿ
  • ವೃತ್ತಿಪರ ಅಪರಾಧಿಯಾಗಿದ್ದ ಮಡುಸ್ವಾಮಿ
  • ಗೂಂಡಾ ವೃತ್ತಿ ಹೊಂದಿರುವ ಹಿನ್ನೆಲೆ ಆದೇಶ
ವಿಜಯಪುರ: ಭೀಮಾತೀರದ ಕುಖ್ಯಾತ ರೌಡಿಗಳಾದ ಧರ್ಮರಾಜ ಚಡಚಣನ ಸಹಚರ ಹಾಗೂ ಸಾಹುಕಾರ ಮಹಾದೇವ ಭೌರಗೊಂಡ ಮೇಲಿನ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಡಿವಾಳಯ್ಯ ಊರ್ಫ್ ಮಡುಸ್ವಾಮಿ ಪಂಚಯ್ಯ ಹಿರೇಮಠನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾರಾವರದ ಕಾರಾಗೃಹದಲ್ಲಿಡಲು ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶಿಸಿದ್ದಾರೆ.
ವಿಜಯಪುರದ ಶಕ್ತಿ ನಗರದಲ್ಲಿ ವಾಸವಾಗಿರುವ ಮಡುಸ್ವಾಮಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು. ಈತ ಗುಂಡಾ ವ್ಯಕ್ತಿಯಾಗಿದ್ದು, ವೃತ್ತಿಪರ ಅಪರಾಧಿಯಾಗಿದ್ದಾನೆ.
ಕಳ್ಳಭಟ್ಟಿ ಮಾರುವವರು, ಮಾದಕ ದ್ರವ್ಯ ಅಪರಾಧಿಗಳು, ಜೂಜುಕೋರರು, ಗುಂಡಾಗಳು, ಅನೈತಿಕ ಮಾನವ ಕಳ್ಳ ಸಾಗಾಣಿಕೆ ಮಾಡುವ ಅಪರಾಧಿಗಳು, ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಮತ್ತು ವಿಡಿಯೋ ಅಥವಾ ಆಡಿಯೋ ಪೂರೈಕೆ ಮಾಡುವ, ಅಪಾಯಕಾರಿ ಚಟುವಟಿಕೆಗಳಲ್ಲಿ ತಡೆ ಅಧಿಯಮದಡಿ ಈತನನ್ನು ಬಂಧಿಸಿ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿಡಲು ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಜುಲೈ 18ರಂದು ಆದೇಶಿಸಿದ್ದಾರೆ.
ಈಗಾಗಲೇ ತುಳಸಿರಾಮ ಹರಿಜನನನ್ನು ಬಂಧಿಸಿ ಚಾಮರಾಜ ನಗರ ಜಿಲ್ಲಾ ಕಾರಾಗೃಹದಲ್ಲಿರಿಸಲು ಆದೇಶವಾಗಿದ್ದು, ಇದೀಗ ಮಡುಸ್ವಾಮಿಯನ್ನೂ ಕಾರಾವರಕ್ಕೆ ಕಳುಹಿಸಲು ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಕೈಗೊಂಡ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net