ಸಮಾಜದಲ್ಲಿ ಉಪಕಾರ ಭಾವನೆ ಬೆಳೆಸಿಕೊಳ್ಳಿ

ವಿಜಯಪುರದ ಎನ್‌ಜಿಒ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಓಲೆಮಠದ ಆನಂದ ದೇವರು ಆಶೀರ್ವಚನ ನೀಡಿದರು. ಬಸವರಾಜೇಂದ್ರ ಶರಣರು, ಆನಂದ ಬ್ಯಾಳಿ, ಹನುಮಂತ ಶಿರೋಳ ಇದ್ದಾರೆ.
ವಿಜಯಪುರದ ಎನ್‌ಜಿಒ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಓಲೆಮಠದ ಆನಂದ ದೇವರು ಆಶೀರ್ವಚನ ನೀಡಿದರು. ಬಸವರಾಜೇಂದ್ರ ಶರಣರು, ಆನಂದ ಬ್ಯಾಳಿ, ಹನುಮಂತ ಶಿರೋಳ ಇದ್ದಾರೆ.
Published on
ವಿಜಯಪುರ: ಸಮಾಜದ ಅಭ್ಯುದಯ ಮತ್ತು ಸಹಾಯ ಬೇಡಿ ಬಂದವರಿಗೆ ಸಾಧ್ಯವಾದಷ್ಟು ಉಪಕಾರ ಮಾಡುವ ಮನೋಭಾವ ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಜಮಖಂಡಿಯ ಓಲೆಮಠದ ಆನಂದ ದೇವರು ಹೇಳಿದರು.
ನಗರದ ಅಥಣಿ ರಸ್ತೆಯ ಎನ್‌ಜಿಒ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ 6ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸದ್ಭಾವನಾ ಜನಜಾಗೃತಿ (ದುಶ್ಚಟಗಳ ನಿರ್ಮೂಲನೆ) ಮತ್ತು ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಡಿಜಿಟಲ್ ವೇದಿಕೆಗಳ ಪ್ರಭಾವ ಮತ್ತು ಮಿತಿಮೀರಿದ ಬಳಕೆಯಿಂದ ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳು ಅಧಃಪತನಗೊಳ್ಳುತ್ತಿವೆ. ಮಾನವ ಕೇವಲ ಹಣ ಗಳಿಕೆಯತ್ತ ತನ್ನ ಜೀವನ ಸಾಗಿಸುತ್ತಿದ್ದು, ಸಂಸಾರವೆAಬ ಪ್ರಾಪಂಚಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾನೆ. ಮನದಲ್ಲಿರುವ ಅಷ್ಟ ಅರಿಷಡ್ವರ್ಗಗಳನ್ನು ತೊಲಗಿಸಿ, ಜೀವನದಲ್ಲಿ ಸಾಕ್ಷಾತ್ಕಾರ ಪಡೆಯಬೇಕು ಎಂದು ತಿಳಿಸಿದರು.
ಪ್ರವಚನಕಾರ ಜುಂಜರವಾಡದ ಬಸವರಾಜೇಂದ್ರ ಶರಣರು ಬಸವಾದಿ ಶರಣರ ಜೀವನ-ಮೌಲ್ವಿಕ ಸಂದೇಶಗಳು ಕುರಿತು ಆರ್ಶಿವರ್ಚನ ನೀಡಿ, ಮನುಷ್ಯ ಹಣ, ಆಸ್ತಿ, ಸಂಪತ್ತು ಏನೆಲ್ಲವನ್ನು ಸಂಪಾದಿಸಿದರೂ ಜೀವನದಲ್ಲಿ ಮಾನಸಿಕ ಸುಖ-ಶಾಂತಿ ಮತ್ತು ನೆಮ್ಮದಿ ಇಲ್ಲದಂತಾಗಿದೆ. ಅದಕ್ಕಾಗಿ ವರ್ಷದಲ್ಲಿ ಈ ಶ್ರಾವಣ ಮಾಸದಲ್ಲಾದರೂ ಇಂತಹ ಮೌಲ್ಯಯುತವಾದ ಸಂದೇಶ ಮತ್ತು ಬದುಕಿನ ಸಾರ್ಥಕತೆ ಬಗ್ಗೆ ಅರಿತುಕೊಂಡು ಬಾಳುವ ಬದುಕ ನಮ್ಮದಾಗಬೇಕು ಎಂದರು.
ಆನAದ ಬ್ಯಾಳಿ ಮತ್ತು ಹನುಮಂತ ಶಿರೋಳ ಸಂಗೀತ ಸಾಥ್ ನೀಡಿದರು. ಪ್ರವಚನ ಮುನ್ನ ಆನಂದ ದೇವರು ಸ್ವಾಮೀಜಿಗಳನ್ನು ಸ್ಥಳಿಯ ಮಹಿಳೆಯರು ಕುಂಭ-ಕಳಶ, ಆರತಿ ಮತ್ತು ಭಜನೆಯೊಂದಿಗೆ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಂಡರು.
ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಲಕ್ಷ್ಮಣ ಶಿಂಧೆ, ಶಿವಪ್ಪ ಸಾವಳಗಿ, ಬಲವಂತ ಬಳೂಲಗಿಡದ, ಭೀಮಾರಾಯ ಬಿರಾದಾರ, ಎಸ್.ಜಿ. ನಿಂಗನಗೌಡ್ರ, ಎಂ.ಎನ್. ಉಕುಮನಾಳಮಠ, ಮಲ್ಲಿಕಾರ್ಜುನ ಪಾಟೀಲ, ರಮೇಶ ಕೋಷ್ಠಿ, ಗಂಗಾಧರ ಚಾಬೂಕಸವಾರ, ಬಾಬು ಕೋಲಕಾರ, ಬಸವರಾಜ ಕನ್ನೂರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net