ವಿಜಯಪುರದ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ಮಹಿಳಾ ದಿನ ಕಾರ್ಯಕ್ರಮವನ್ನು ಉಜ್ವಲಾ ಸರನಾಡಗೌಡ ಉದ್ಘಾಟಿಸಿದರು. ಅಶೋಕ ಪಾಟೀಲ, ವಿಜಯಲಕ್ಷಿ÷್ಮ ಬೆನಕಟ್ಟಿ, ಪ್ರಸಾದಶಕ್ತಿ ಗನ್ನೂರ ಮತ್ತಿತರರಿದ್ದರು.
Published on:
Copied
Follow Us
ವಿಜಯಪುರ: ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಅವರ ಯಶಸ್ಸಿಗೆ ಸಹಾಯ ಮಾಡಬೇಕು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಉಜ್ವಲಾ ಸರನಾಡಗೌಡ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಸಬಲಾ ಮಹಿಳಾ ಸಬಲೀಕರಣ ಘಟಕ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾತನಾಡಿ, ಬಿಎಲïಡಿಇ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಸಮರ್ಪಣೆ, ಪರಿಶ್ರಮ ಮತ್ತು ನಿಷ್ಠೆ ಶ್ಲಾಘನಾರ್ಹ. ಅವರು ವೃತ್ತಿಪರ ಜವಾಬ್ದಾರಿಗಳ ಜತೆಗೆ ವೈಯಕ್ತಿಕ ಬದುಕಿನ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸುತ್ತ ಸಂಸ್ಥೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನಂತರ ಅನುಸಂಧಾನ-2026 ರಾಷ್ಟ್ರೀಯ ಸಮ್ಮೇಳನದ ಮಾಹಿತಿ ಪತ್ರಿಕೆಯ ಬಿಡುಗಡೆಗೊಳಿಸಲಾಯಿತು.
ಸಬಲಾ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಬೆನಕಟ್ಟಿ ಸ್ವಾಗತಿಸಿದರು. ಶಲ್ಯ ತಂತ್ರ ವಿಭಾಗದ ಪ್ರಾಧ್ಯಾಪಕ ಪ್ರಸಾದಶಕ್ತಿ ಗನ್ನೂರ ಮಹಿಳಾ ಸಬಲೀಕರಣ ಘಟಕದ ವಾರ್ಷಿಕ ವರದಿ ಮಂಡಿಸಿದರು. ಸಬಲಾ ಸದಸ್ಯ ಕಾರ್ಯದರ್ಶಿ ಅಶ್ವಿನಿ ನಿಂಬಾಳ ವಂದಿಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಯವರ ವರ್ಷದಪೂರ್ತಿ ಸಲ್ಲಿಸಿದ ಸೇವೆ ಮತ್ತು ಸಮರ್ಪಣೆ ಗೌರವಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ಮಂಟೂರಿಗೆ ಮನರಂಜನಾ ಪ್ರವಾಸ ನಡೆಯಿತು.