ಗ್ರಾಮದಲ್ಲಿಯೇ ನಿರಂತರ ಉದ್ಯೋಗ ಸೃಷ್ಟಿ

ತಿಕೋಟಾ ತಾಲೂಕಿನ ತಾಜಪೂರ ಹೆಚ್. ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ‘ದುಡಿಯೋಣ ಬಾ’ ಅಭಿಯಾನ ನಡೆಯಿತು. ಉಮೇಶ ಕನಮಡಿ, ಚಂದ್ರಶೇಖರ ಬಿದರಿ, ಕಲ್ಲಪ್ಪ ನಂದರಗಿ, ಸಿದ್ರಾಯ ದಾಶ್ಯಾಳ, ಹಾಜಿಸಾಬ ಮುಲ್ಲಾ, ಹಣಮಂತ ಕಬ್ಬೂರ ಇತರರಿದ್ದರು.
ತಿಕೋಟಾ ತಾಲೂಕಿನ ತಾಜಪೂರ ಹೆಚ್. ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ‘ದುಡಿಯೋಣ ಬಾ’ ಅಭಿಯಾನ ನಡೆಯಿತು. ಉಮೇಶ ಕನಮಡಿ, ಚಂದ್ರಶೇಖರ ಬಿದರಿ, ಕಲ್ಲಪ್ಪ ನಂದರಗಿ, ಸಿದ್ರಾಯ ದಾಶ್ಯಾಳ, ಹಾಜಿಸಾಬ ಮುಲ್ಲಾ, ಹಣಮಂತ ಕಬ್ಬೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಒ ಉಮೇಶ ಕನಮಡಿ ಹೇಳಿಕೆ
  • ‘ದುಡಿಯೋಣ ಬಾ’ ಅಭಿಯಾನ
ತಿಕೋಟಾ: ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ವಲಸೆ ತಪ್ಪಿಸಿ ನಿರಂತರವಾಗಿ ಗ್ರಾಮದಲ್ಲಿಯೇ ಅವರಿಗೆ ಉದ್ಯೋಗ ಒದಗಿಸುವ ಮೂಲಕ ಗ್ರಾಮೀಣಮಟ್ಟದ ಆಸ್ತಿಗಳ ರಚನೆ ಮಾಡುವುದು. ಜಲ ಸಂರಕ್ಷಣೆ ಮಾಡಿ ಅಂತರ್ಜಲ ಮಟ್ಟ ವೃದ್ಧಿಸುವುದು, ಅರಣ್ಯೀಕರಣ ಕಾಮಗಾರಿಗಳು, ಶಾಲಾ ಅಭಿವೃದ್ಧಿ ಕಾಮಗಾರಿ ಯಶಸ್ವಿಯಾಗಿ ನಿರ್ಮಾಣ ಮಾಡುವುದು ನರೇಗಾ ಯೋಜನೆ ಮೂಲ ಉದ್ದೇಶವಾಗಿದೆ ಎಂದು ಪಿಡಿಒ ಉಮೇಶ ಕನಮಡಿ ಹೇಳಿದರು.
ತಾಲೂಕಿನ ತಾಜಪೂರ ಹೆಚ್. ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ‘ದುಡಿಯೋಣ ಬಾ’ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೂಲಿಕಾರರಿಗೆ ವಿವಿಧ ಕಾಮಗಾರಿಗಳಡಿ ನಿರಂತರ ಕೆಲಸ ನೀಡಲಾಗುತ್ತಿದೆ. ನರೇಗಾ ಕೂಲಿಕಾರರಿಗೆ ತೊಂದರೆಯಾಗದಂತೆ ಕೂಲಿಯಾಧಾರಿತ ಸಮುದಾಯ ಕಾಮಗಾರಿಗಳಲ್ಲಿ ಹೆಚ್ಚಿನ ಕೆಲಸ ನೀಡಲಾಗುತ್ತದೆ. ಈ ಬಗ್ಗೆ ಕೂಲಿಕಾರರಿಗೆ ಹೆಚ್ಚಿನ ಅರಿವು ಮೂಡಿಸಿ ಯೋಜನೆಯತ್ತ ಕರೆ ತಂದು, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಕೂಲಿಕಾರರನ್ನು ಸಂಘಟಿಸುವ ಕಾರ್ಯ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ಮನರೇಗಾ ಯೋಜನೆಯಡಿ ಎಲ್ಲ ನೋಂದಾಯಿತ ಕೂಲಿಕಾರರು ಕೆಲಸ ನಿರ್ವಹಿಸಲು ಮುಂದೆ ಬರಬೇಕು ಆ ಮೂಲಕ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಗ್ರಾ.ಪಂ. ಕಾರ್ಯದರ್ಶಿ ಚಂದ್ರಶೇಖರ ಬಿದರಿ ಮಾತನಾಡಿ, ಬೇಸಿಗೆ ಅವಧಿಯಲ್ಲಿ ಮಾತ್ರವಲ್ಲದೇ ಕೂಲಿ ಕೇಳಿ ಬರುವ ಎಲ್ಲ ಕೂಲಿಕಾರರಿಗೆ ಕೆಲಸ ನೀಡಲು ಗ್ರಾಮ ಪಂಚಾಯಿತಿ ಸಿದ್ಧವಾಗಿದೆ. ಕೂಲಿ ಕೇಳಿ ಬರುವ ಕೂಲಿಕಾರರಿಗೆ 15 ದಿನಗಳಲ್ಲಿ ಕೆಲಸ ನೀಡುವ ನಿಯಮವಿದೆ ಆದರೆ ನಮ್ಮ ಗ್ರಾಮ ಪಂಚಾಯತಿಯಲ್ಲಿ ಕೇವಲ 3-4 ದಿನದಲ್ಲಿಯೇ ಕೆಲಸ ನೀಡುತ್ತಿದ್ದೇವೆ. ಅವರು ಈ ಯೋಜನೆಯಡಿ ದುಡಿಯುವುದರಿಂದ ಗ್ರಾಮಕ್ಕೆ ಬಹಳಷ್ಟು ಅನುಕೂಲವಿದೆ. ಹೀಗಾಗಿ ಗ್ರಾಮದ ಜನರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಮಗಾರಿಗಳಡಿ ಕೆಲಸ ಮಾಡಬೇಕು. ತಮಗೆ ಬೇಕಾದ ಎಲ್ಲಾ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯಿತಿ ಸದಾ ಸಿದ್ಧವಾಗಿದೆ ಎಂದರು.
ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ ಗ್ರಾ.ಪಂ.ನಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಮನೆ ಮನೆಗೆ ತೆರಳಿ ಯೋಜನೆ ಕುರಿತು ಜನರಿಗೆ ಮಾಹಿತಿ ನೀಡುವುದರ ಜತೆಗೆ ಅವರಿಂದ ನಮೂನೆ 6ರಡಿ ಕೆಲಸದ ಬೇಡಿಕೆ ಸ್ವೀಕರಿಸಿ, ಕೂಲಿಕಾರರಿಗೆ ಯೋಜನೆ ಸೌಲಭ್ಯ ತಲುಪುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಬಿಎಫ್‌ಟಿ ಸಿದ್ರಾಯ ದಾಶ್ಯಾಳ, ಡಿಇಒ ಹಾಜಿಸಾಬ ಮುಲ್ಲಾ, ರಾಜಶ್ರೀ, ಸ್ವಾತಿ, ಸಂತೂರಿ, ಅಂಜನಾ, ಹಣಮಂತ ಕಬ್ಬೂರ, ಇಬ್ರಾಹಿಂ ಮೊಕಾಶಿ, ರಾಜಕುಮಾರ ಮಸೂತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net