ಭಾಗವತ ಪ್ರವಚನದ ಸಮಾರೋಪ

ವಿಜಯಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಽಕ ಮಾಸದ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮಗಳ ಮಂಗಳದಲ್ಲಿ ಪಂ. ಮಧ್ವೇಶಾಚಾರ್ಯ ಮುತ್ತಗಿ ಆಶೀರ್ವಚನ ನೀಡಿದರು.
ವಿಜಯಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಽಕ ಮಾಸದ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮಗಳ ಮಂಗಳದಲ್ಲಿ ಪಂ. ಮಧ್ವೇಶಾಚಾರ್ಯ ಮುತ್ತಗಿ ಆಶೀರ್ವಚನ ನೀಡಿದರು.
Published on
ವಿಜಯಪುರ : ಇಲ್ಲಿನ ಬಾಗಲಕೋಟೆ ರಸ್ತೆಯಲ್ಲಿರುವ ನಂಜನಗೂಡು ರಾಯರ ಮಠದಲ್ಲಿ ಅಽಕ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ 33 ಭಜನಾ ಹಾಡುಗಳು ಗೌರಿ ಪೂಜೆ ಭಾಗವತ ಪ್ರವಚನದ ಸಮಾರೋಪ ಭಾನುವಾರ ನಡೆಯಿತು.
ಪಂಡಿತ ಮಧ್ವೇಶಾಚಾರ್ಯ ಮುತ್ತಗಿ ಶ್ರೀಮದ್ಭಾಗವತದ ಮಂಗಲವನ್ನು ನೆರವೇರಿಸಿ, ಆಶೀರ್ವಚನ ನೀಡಿ, ಭಗವಂತನನ್ನು ಶ್ರದ್ಧಾ ಭಕ್ತಿಯಿಂದ ಸ್ಮರಿಸಿದರೆ ಖಂಡಿತ ಆತ ಕರುಣೆ ತೋರುತ್ತಾನೆ.
ಭಗವಂತನಿಗೆ ಗಂಧ ಸಮರ್ಪಿಸಿದರೇ ಆತ ಸೌಂದರ್ಯ ನೀಡುತ್ತಾ ನೀಡುತ್ತಾನೆ. ಅಽಕ ಮಾಸ ಪರಮಾತ್ಮನ ಮಾಸ. ಈ ಮಾಸದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳು ಜೀವನವನ್ನು ಪಾವನಗೊಳಿಸುತ್ತವೆ. ದಾನ ಧರ್ಮ ಸಂಕೀರ್ತನೆಗಳು ಪರಮಾತ್ಮನಿಗೆ ಸಂತೃಪ್ತಗೊಳಿಸುತ್ತವೆ ಎಂದು ತಿಳಿಸಿದರು.
ಶ್ರೀಮಠದ ವಿಚಾರಣಕರ್ತ ಗೋಪಾಲ ನಾಯಕ ಮಾತನಾಡಿ, ಮಂತ್ರಾಲಯ ಪೀಠಾಽಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಮಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಠದ ವ್ಯವಸ್ಥಾಪಕ ಪ್ರಧಾನ ಅರ್ಚಕ ರವಿ ಆಚಾರ್ಯ, ಅರ್ಚಕ ಶ್ರೀಧರಾಚಾರ್ಯ, ದಾಮೋದರಾಚಾರ್ಯ, ವಾಮನರಾವ ದೇಶಪಾಂಡೆ, ಡಿ.ಆರ್. ನಾಡಿಗ, ಅಶೋಕ ತಾವರಗೇರಿ ಮತ್ತಿತರರಿದ್ದರು.
ಭಜನಾ ಮಂಡಳಿಯ ಬ್ರಾಹ್ಮಣ ಸುವಾಸಿನಿಯರು ಆಽಕ ಮಾಸದ ಗೌರಿಯನ್ನು ಸುಂದರವಾಗಿ ಅಲಂಕರಿಸಿದ್ದರು. ಅಲ್ಲದೇ, ಮಂಗಳಕ್ಕೂ ಮುನ್ನ 33 ಹಾಡುಗಳನ್ನು ಹಾಡುವ ಭಕ್ತಿ ಸಮರ್ಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net