ಭೂ ರಹಿತರಿಗಾಗಿ ಭೂಮಿ ನೀಡಲು ಬದ್ಧ

ವಿಜಯಪುರ ನಗರದ ಬುದ್ಧವಿಹಾರಕ್ಕೆ ಭೇಟಿ ನೀಡಿದ ಸಚಿವ ಎಂ. ಬಿ. ಪಾಟೀಲರನ್ನು ಸಮಿತಿ ಸದಸ್ಯರು ಪುಸ್ತಕ ನೀಡಿ ಗೌರವಿಸಿದರು. ರಾಜಶೇಖರ ಯಡಹಳ್ಳಿ, ಚಂದ್ರಶೇಖರ ಕೊಡಬಾಗಿ, ಅಡಿವೆಪ್ಪ ಸಾಲಗಲ ಮತ್ತಿತರರಿದ್ದಾರೆ.
ವಿಜಯಪುರ ನಗರದ ಬುದ್ಧವಿಹಾರಕ್ಕೆ ಭೇಟಿ ನೀಡಿದ ಸಚಿವ ಎಂ. ಬಿ. ಪಾಟೀಲರನ್ನು ಸಮಿತಿ ಸದಸ್ಯರು ಪುಸ್ತಕ ನೀಡಿ ಗೌರವಿಸಿದರು. ರಾಜಶೇಖರ ಯಡಹಳ್ಳಿ, ಚಂದ್ರಶೇಖರ ಕೊಡಬಾಗಿ, ಅಡಿವೆಪ್ಪ ಸಾಲಗಲ ಮತ್ತಿತರರಿದ್ದಾರೆ.
Published on
ವಿಜಯಪುರ: ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳು ಸದಾ ಪ್ರಸ್ತುತವಾಗಿವೆ. ಅವರ ಕನಸುಗಳನ್ನು ನನಸಾಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಭಾನುವಾರ, ನಗರದ ಬುದ್ಧ ವಿಹಾರಕ್ಕೆ ಭೇಟಿ ನೀಡಿ ಭಗವಾನ ಬುದ್ಧರ ಮೂರ್ತಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ, ಬುದ್ಧ ವಿಹಾರದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಸಚಿವ ಪ್ರೊ. ರಾಜು ಆಲಗೂರ ಅವರಿಗೆ ಎಂಎಲï‌ಸಿ (ವಿಧಾನ ಪರಿಷತ ಸದಸ್ಯ) ಯಾಗಿ ಮಾಡಲು ಹೈಕಮಾಂಡ್ ಮನವರಿಕೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಸಚಿವರು ತಿಳಿಸಿದರು.
ನಮ್ಮ ತಂದೆಯವರ ಕಾಲದಿಂದಲೂ ದಲಿತ ಸಮುದಾಯದೊಂದಿಗೆ ನಮ್ಮ ಕುಟುಂಬ ಅವಿನಾಭಾವ ಸಂಬAಧವಿದೆ. ಭೂ ರಹಿತರಿಗಾಗಿ ಭೂಮಿ ನೀಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಇಲ್ಲಿನ ಬುದ್ಧ ವಿಹಾರ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ. ಬುದ್ಧ, ಬಸವ, ಅಂಬೇಡ್ಕರ ಸಿದ್ಧಾಂತದAತೆ ನಾವೆಲ್ಲರೂ ಸಮ ಸಮಾಜ ನಿರ್ಮಿಸಲು ಕಾರ್ಯೋನ್ಮುಖರಾಗೋಣ ಎಂದು ಕರೆ ನೀಡಿದರು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, ಸಚಿವ ಎಂ.ಬಿ. ಪಾಟೀಲರು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಕೆಲಸಗಳನ್ನು ಮಾಡಲಿz್ದÁರೆ. ಅವರು ನಮಗೆ ಬೆನ್ನೆಲುಬಾಗಿ ನಿಂತಿz್ದÁರೆ ಎಂದರು.
ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿ, ಸಚಿವರು ಬುದ್ಧವಿಹಾರ ನಿರ್ಮಾಣಕ್ಕೆ 4 ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಲದೆ, ಸಮಾಜದ ಕಲ್ಯಾಣಕ್ಕೂ ಕೊಡುಗೆ ನೀಡಿದ್ದು, ಬುದ್ಧ ಮತ್ತು ಬಾಬಾಸಾಹೇಬರ ಆಶೀರ್ವಾದ ಎಂ.ಬಿ. ಪಾಟೀಲರ ಮೇಲಿದೆ ಎಂದು ತಿಳಿಸಿದರು.
ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿದರು. ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮುಖಂಡರಾದ ಸಾಬು ಚಲವಾದಿ, ಶಾಂತೇಶ ಶಹಾಪುರ, ಸುರೇಶ ಘೊಣಸಗಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ, ರಾಜು ತೊರವಿ, ಅಭಿಷೇಕ ಚಕ್ರವರ್ತಿ, ಶಶಿಕಾಂತ ಹೊನವಾಡಕರ, ಸುನೀಲ ಉಕ್ಕಲಿ, ಆನಂದ ಔದಿ, ಕುಮಾರ ಶಹಾಪುರ, ಬಸವಂತ ಗುಣದಾಳ, ರಾಜು ಕುಚಬಾಳ, ಬಸವಂತ ಬ್ಯಾಳಿ, ಎಂ.ಬಿ. ಹಳ್ಳದಮನಿ, ಮಲ್ಲು ಕುಚಬಾಳ, ಯಂಕು ವಗ್ಯಾನವರ, ಮನೋಜ ಕೋಟ್ಯಾಳ, ರಮೇಶ ಯಡಹಳ್ಳಿ, ಮಹಾದೇವ ಬನಸೋಡೆ, ಸುಜಾತಾ ಚಂಚಲಕರ, ಭಾರತಿ ಹೊಸಮನಿ, ಶಾರದಾ ಹೊಸಮನಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net