ಆಗಸ್ಟ್ 8ರೊಳಗೆ ಮತದಾರರ ಗಣತಿ ನಮೂನೆ ಸಲ್ಲಿಸಿ, ಆಯುಕ್ತ ವಿಜಯಕುಮಾರ ಮಕ್ಕಳಕಿ ಮನವಿ

ವಿಜಯಪುರ ನಗರದ ಮಹಾನಗರ ಪಾಲಿಕೆಯಲ್ಲಿ ಆಯುಕ್ತ ವಿಜಯಕುಮಾರ ಮೆಕ್ಕಳಕಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು. ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ, ಮುಖಂಡರಾದ ಇರ್ಫಾನ್ ಶೇಖ ಇತರರಿದ್ದಾರೆ.
ವಿಜಯಪುರ ನಗರದ ಮಹಾನಗರ ಪಾಲಿಕೆಯಲ್ಲಿ ಆಯುಕ್ತ ವಿಜಯಕುಮಾರ ಮೆಕ್ಕಳಕಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು. ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ, ಮುಖಂಡರಾದ ಇರ್ಫಾನ್ ಶೇಖ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ರಾಜಕೀಯ ಪಕ್ಷಗಳ ಮುಖಂಡರ ಸಭೆ
  • ಮತದಾರರ ಗಣತಿ ನಮೂನೆ ಸಲ್ಲಿಸಲು ಗಡವು
  • ಆಗಸ್ಟ್ 8ರೊಳಗೆ ಕಡ್ಡಾಯವಾಗಿ ಸಲ್ಲಿಸಿ
ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಹಿನ್ನೆಲೆ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿದ್ದರೂ, ಅನೇಕರು ಇನ್ನೂ ಅವುಗಳನ್ನು ಭರ್ತಿ ಮಾಡಿ ಹಿಂತಿರುಗಿಸಿಲ್ಲ. ಪ್ರಸ್ತುತ ಸುಮಾರು 21,259 ಗಣತಿ ನಮೂನೆಗಳು ಮತದಾರರಿಂದ ಬರಬೇಕಿದ್ದು, ಅವುಗಳನ್ನು ಆಗಸ್ಟ್ 8ರೊಳಗೆ ಕಡ್ಡಾಯವಾಗಿ ಸಲ್ಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮನವಿ ಮಾಡಿದರು.
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ
ನಡೆಸಿದ ಅವರು, ನಿಗದಿತ ಅವಧಿಯೊಳಗೆ ಗಣತಿ ನಮೂನೆಗಳನ್ನು ಸಲ್ಲಿಸದಿದ್ದರೆ ಅಂತಹ ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಜುಲೈ 30ರ ಮಧ್ಯಾಹ್ನ 12 ರವರೆಗೆ ಒಟ್ಟು 2,90,184 ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ 2,00,109 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಜೊತೆಗೆ 2,460 ನಮೂನೆಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ. 32,851 ಮತದಾರರು ಗೈರುಹಾಜರಾಗಿದ್ದು, 21,158 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 7,523 ಮತದಾರರು ಮೃತಪಟ್ಟಿದ್ದು, 7,264 ಮಂದಿ ಈಗಾಗಲೇ ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ, ತಮ್ಮ ಪಕ್ಷದ ವತಿಯಿಂದ ನೇಮಕಗೊಂಡಿರುವ ಬಿಎಲ್‌ಎಗಳ ಮೂಲಕ ಗೈರುಹಾಜರಿಯಲ್ಲಿರುವ ಮತದಾರರನ್ನು ಪತ್ತೆಹಚ್ಚಿ, ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಲು ಸಹಕರಿಸುವಂತೆ ಸೂಚಿಸಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ, ಮುಖಂಡರಾದ ಇರ್ಫಾನ್ ಶೇಖ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net