ಆಹಾರ ಮೇಳದಲ್ಲಿರುವ ಆಹಾರ ಪದಾರ್ಥಗಳ ‘ಮೆನು’ ಅಲ್ಲಿರುವ ತರಹೇವಾರಿ ಆಹಾರ ಪದಾರ್ಥಗಳ ಮಾಹಿತಿ ನೀಡಿತಲ್ಲದೇ ಸ್ಟಾರ್‌ಹೋಟೆಲ್‌ಗಳ ವೈಭವ ನೆನಪಿಸಿತು. ಡೋಕ್ಲಾ, ಆಲೂ ಪರೋಠಾ, ಆಲೂ ಸಮೋಸಾ, ಬ್ರೆಡ್ ಮಲಾಯಿ, ಮಸಾಲಾ ವಡಾ, ದಹಿ ವಡಾ, ಮಸಾಲಾ ಪಾಪಡ್, ಗೋಬಿ ಮಂಚೂರಿ, ಪಾನಿಪುರಿ, ಫಿಂಗರ್ ಚಿಪ್ಸ್, ಮಿಕ್ಸ್ಡ್ ಫ್ರುಟ್ ಸಲಾಡ್, ಚಾಕೊಲೇಟ್, ಮಿಲ್ಕ್ ಶೇಕ್, ವಿವಿಧ ಬಗೆಯ ಡೋನೆಟ್‌ಗಳು, ಸ್ಟಾಬೆರಿ, ಆರೆಂಜ್ ಮೊದಲಾದ ಬಗೆಯ ಐಸ್ ಕ್ರೀಂಗಳು, ಅನೇಕ ಬಗೆಯ ಸಿಹಿ ತಿನಿಸಿಗಳು, ವೆಜ್ ಬಿರ್ಯಾನಿ, ಝೀರಾ ರೈಸ್ ಸೇರಿದಂತೆ ಅನೇಕ ಬಗೆಯ ಆಹಾರ ಪದಾರ್ಥಗಳು ನೋಡುಗರ ಬಾಯಯಲ್ಲಿ ನೀರೂರಿಸಿದವು. ಪಾಲಕರು ಸಹ ಉತ್ಸಾಹದಿಂದ ಈ ಮೇಳಕ್ಕೆ ಕೈ ಜೋಡಿಸಿ ಮಕ್ಕಳಿಗೆ ಸಾಥ್ ನೀಡಿದರು.