ಸೌಹಾರ್ದತೆಯಿಂದ ಹಬ್ಬ ಆಚರಿಸಿ

 ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಮೊಹರಂ ನಿಮಿತ್ತ ಜರುಗಿದ ಶಾಂತಿ ಸಭೆಯಲ್ಲಿ ಪಿಎಸ್‌ಐ ಪ್ರೇಮಾ ಚೌರ ಮಾತನಾಡಿದರು. ಶಂಕರಗೌಡ ಪಾಟೀಲ, ಮಹಿಬೂಬ ಹುಂಡೇಕಾರ, ಎಂ.ಎಚ್.  ಪಾನಪರೋಷ ಇತರರಿದ್ದರು.
ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಮೊಹರಂ ನಿಮಿತ್ತ ಜರುಗಿದ ಶಾಂತಿ ಸಭೆಯಲ್ಲಿ ಪಿಎಸ್‌ಐ ಪ್ರೇಮಾ ಚೌರ ಮಾತನಾಡಿದರು. ಶಂಕರಗೌಡ ಪಾಟೀಲ, ಮಹಿಬೂಬ ಹುಂಡೇಕಾರ, ಎಂ.ಎಚ್. ಪಾನಪರೋಷ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೊಹರಂ ಹಬ್ಬದ ಪೂರ್ವಭಾವಿ ಶಾಂತಿ ಸಭೆ
  • ಪಿಎಸ್‌ಐ ಪ್ರೇಮಾ ಚೌರ
ದೇವರಹಿಪ್ಪರಗಿ: ಹಬ್ಬ ಹರಿದಿನಗಳು ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಹೋದರತ್ವ ಸಾರುವ ರಹದಾರಿಯಾಗಿದ್ದು, ಮೊಹರಂ ಹಬ್ಬವನ್ನು ಸರ್ವ ಧರ್ಮದವರು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಅಪರಾಧ ವಿಭಾಗದ ಪಿಎಸ್‌ಐ ಪ್ರೇಮಾ ಚೌರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಮೊಹರಂ ಹಬ್ಬದ ಪೂರ್ವಭಾವಿ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಮು ಮನೋಭಾವನೆ ತೋರುವ ಮತ್ತು ವೈಯಕ್ತಿಕ ಜಗಳವನ್ನು ಮೊಹರಂ ಹಬ್ಬದಲ್ಲಿ ತಂದು ಗಲಭೆ ಸೃಷ್ಟಿಸುವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಂದರ್ಭದಲ್ಲಿ ಧರ್ಮ ಮತ್ತು ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವವರ ಮೇಲೂ ಕಠಿಣ ಕ್ರಮ ಜರುಗಿಸಲಾಗುವುದು ಹೇಳಿದರು.
ಶಂಕರಗೌಡ ಪಾಟೀಲ, ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಿಬೂಬ ಹುಂಡೆಕಾರ್, ಉಪಾಧ್ಯಕ್ಷ ಎಂ.ಎಚ್. ಪಾನರೋಶ ಹಾಗೂ ಪಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ ಮಾತನಾಡಿ, ನಮ್ಮಲ್ಲಿ ಹಿಂದೂ ಮತ್ತು ಮುಸ್ಲಿಂ ಸಹೋದರರಂತೆ ಪರಸ್ಪರ ಸೇರಿಕೊಂಡು ಎಲ್ಲ ಹಬ್ಬ ಆಚರಿಸಿಕೊಂಡು ಬಂದಿದ್ದೇವೆ. ಹಬ್ಬದ ವೇಳೆ ಪೊಲೀಸರ ಸಹಕಾರ ಬಹಳ ಅವಶ್ಯವಾಗಿದ್ದು, ಇಲಾಖೆ ಜೊತೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಪಪಂ ಸದಸ್ಯರಾದ ಕಾಸುಗೌಡ ಜಲಕತ್ತಿ, ಕಾಸಪ್ಪ ಜಮಾದಾರ, ಶಂಕರ ಜಮಾದಾರ, ರಾವೂತ ಎಸ್.ಟಿ., ಜಿ.ಎಂ. ಹಿರೇಮಠ, ಮಹಮ್ಮದ್ ರಫೀಕ್ ಮೋಮಿನ್, ಮಲ್ಲು ಜಮಾದಾರ, ಅಲ್ಲಾಬಕ್ಷ ಗರಡಿಮನಿ, ಇಲಾಖೆ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net