ಝಳಕಿ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ನಡೆದ ಶಾಂತಿ ಪಾಲನೆ ಪೂರ್ವಭಾವಿ ಸಭೆಯಲ್ಲಿ ಝಳಕಿ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ ತೀರಕನ್ನವರ ಮಾತನಾಡಿದರು. ರವಿಕುಮಾರ್ ಹೂಗಾರ, ಎಂ.ಎ-ï. ಬಿರಾದಾರ, ಶಂಭುಲಿಂಗ ಪೂಜಾರಿ, ಭೀಮರಾಯ ದೇವರ ಇತರರಿದ್ದರು.
ಹೊರ್ತಿ: ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದು ಝಳಕಿ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ ತೀರಕನ್ನವರ ಹೇಳಿದರು.
ಝಳಕಿ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಠಾಣಾ ವ್ಯಾಪ್ತಿಯ ೨೭ ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ನಡೆದ ಶಾಂತಿ ಪಾಲನೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬಕ್ರೀದ್ ಹಬ್ಬದ ನೆಪದಲ್ಲಿ ಯಾವುದೇ ಕಾನೂನು ಬಾಹಿರ ಕಾರ್ಯಕ್ರಮ ಚಟುವಟಿಕೆ ಹಮ್ಮಿಕೊಳ್ಳಬಾರದು. ಗೋವು ಹತ್ಯೆ ಮಾಡುವುದು ಕಾನೂನು ಬಾಹಿರ, ಆದ್ದರಿಂದ ಅದನ್ನು ಕಾನೂನಾತ್ಮಕವಾಗಿ ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿದರು.