ಒಟ್ಟು 20 ಪ್ರಕರಣಗಳಲ್ಲಿ 42 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ 1,20,04,750 ರೂ.ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹು, ಸಿಸಿಟಿವಿ ದೃಶ್ಯಾವಳಿಗಳು, ಸ್ಥಳೀಯವಾಗಿ ದೊರೆತ ಮಾಹಿತಿ, ನವೀನ ತಂತ್ರಜ್ಞಾನ ಹೀಗೆ ವಿವಿಧ ತನಿಖಾ ಕೌಶಲಗಳನ್ನು ಉಪಯೋಗಿಸಿ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.