ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಬರತೊಡಗುತ್ತಿದ್ದಂತೆ ಡಿಡಿಪಿಐ ಅಳೆದು ತೂಗಿ ತಂತ್ರಾಂಶ ದುರುಪಯೋಗದ ಕುರಿತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯುತ್ತಾರೆ. ಆ ಪತ್ರ ಪರಿಶೀಲಿಸಿದ ಆಯುಕ್ತರು ಬಹಳ ಸ್ಪಷ್ಟವಾಗಿ ಮಾರ್ಗದರ್ಶನ ನೀಡಿದ್ದೇನೆಂದರೆ-‘ಮಾನ್ಯತೆ ನವೀಕರಿಸುವ, ಪ್ರಥಮ ಮಾನ್ಯತೆ ನೀಡುವ ಅಥವಾ ತಿರಸ್ಕರಿಸುವ ಸೂಕ್ತ ಪ್ರಾಧಿಕಾರ ತಾವೇ ಆಗಿರುತ್ತೀರಿ. ಈ ಕುರಿತಂತೆ ಅಕ್ರಮವಾಗಿರುವ ಕುರಿತು ಸೂಕ್ತ ದಾಖಲೆಗಳೊಂದಿಗೆ ಸಂಬಂಧಿಸಿದ ನೌಕರರು, ಅಧಿಕಾರಿಗಳ ವಿರುದ್ಧ ನಿಮ್ಮ ಹತ್ತಿರದ ಠಾಣೆ ಅಥವಾ ಸೈಬರ್ ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ’ ತಿಳಿಸಿದ್ದು. ಆದರೆ, ಎಫ್‌ಐಆರ್‌ನಲ್ಲಿ ಎಲ್ಲೂ ಸೂಕ್ತ ದಾಖಲೆ ಸಲ್ಲಿಸಿದ್ದಾಗಲಿ, ಸಂಬಂಧಿಸಿದ ಅಧಿಕಾರಿ ಅಥವಾ ನೌಕರರ ಹೆಸರು ಉಲ್ಲೇಖಿಸಿದ್ದಾಗಲಿ ಕಂಡು ಬಂದಿಲ್ಲ. ಆದರೆ, ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.