ಜಿ¯್ಲೆಯಲ್ಲಿ ದೇಹದಾನದ ಜಾಗೃತಿ ಹೆಚ್ಚಾಗುತ್ತಿದ್ದು, ಗುರುವಾರ ನಿಧನರಾದ ತಾಳಿಕೋಟೆ ಪಟ್ಟಣ ಮತ್ತು ತಾಳಿಕೋಟೆ ತಾಲೂಕಿನ ಕಾರಗನೂರ ಗ್ರಾಮದ ಇಬ್ಬರ ಪಾರ್ಥಿವ ಶರೀರಗಳನ್ನು ಕುಟುಂಬಸ್ಥರು ನಗರದ ಬಿಎಲïಡಿಇ ಆಸ್ಪತ್ರೆಗೆ ದಾನ ಮಾಡಿz್ದÁರೆ.
ತಾಳಿಕೋಟೆ ಪಟ್ಟಣದ ಸುಭಾಸಚಂದ್ರ ಸದಾಶಿವ ಹುz್ದÁರ (76) ಬಿಎಲïಡಿಇ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಬಿಎಲïಡಿಇ ಆಸ್ಪತ್ರೆಗೆ ದಾನ ಹಸ್ತಾಂತರ ಮಾಡಿದರು.
ತಾಳಿಕೋಟೆ ತಾಲೂಕಿನ ಕಾರಗನೂರ ಗ್ರಾಮದಲ್ಲಿ ನಿಧನರಾದ ಶಾಂತಪ್ಪ ಮಲ್ಲಪ್ಪ ಹಿಪ್ಪರಗಿ(73) ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಗ್ರಾಮಕ್ಕೆ ಆಗಮಿಸಿದ ಬಿಎಲïಡಿಇ ಡೀಮ್ಡï ವಿಶ್ವವಿದ್ಯಾಲಯ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜ್, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಅಂಗರಚನಾಶಾಸö ವಿಭಾಗದ ಸಿಬ್ಬಂದಿಗೆ ಹಸ್ತಾಂತರಿಸಿದರು.
ಎರಡೂ ಪಾರ್ಥಿವ ಶರೀರಗಳನ್ನು ಸ್ವೀಕರಿಸಿದ ಅಂಗರಚನಾಶಾಸö ವಿಭಾಗದ ಮುಖ್ಯಸ್ಥ ಡಾ. ಆರ್.ಎಸ್. ಬುಲಗೌಡ ಅವರು ಮೃತರ ಇಚ್ಥೆಯಂತೆ ಪಾರ್ಥಿವ ಶರೀರ ದಾನ ಮಾಡಿದ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸಿz್ದÁರೆ.