ಕ್ರೀಡಾಕೂಟದಲ್ಲಿ ಬಿಎಲ್‌ಡಿಇ ವಿದ್ಯಾರ್ಥಿಗಳ ಸಾಧನೆ

ಸಿಲ್ಹೌಟ್ಟೀಸ್-೨೦೨೬ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಜಯಪುರದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಹಾಗೂ ಅಲೈಡ್ ಹೆಲ್ತ್‌ ಸೈನ್ಸಸ್ ವಿಭಾಗದ ವಿದ್ಯಾರ್ಥಿಗಳು.
ಸಿಲ್ಹೌಟ್ಟೀಸ್-೨೦೨೬ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಜಯಪುರದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಹಾಗೂ ಅಲೈಡ್ ಹೆಲ್ತ್‌ ಸೈನ್ಸಸ್ ವಿಭಾಗದ ವಿದ್ಯಾರ್ಥಿಗಳು.
Published on
ವಿಜಯವಾಣಿ ಸುದ್ದಿಜಾಲ, ವಿಜಯಪುರ
ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗದ ವಿದ್ಯಾರ್ಥಿಗಳು ಪುಣೆಯ ಆರ್ಮ್ಡ್ ಪೋಸರ್ಸ್ ಮೆಡಿಕಲ್ ಕಾಲೇಜಿನಲ್ಲಿ ಮೇ ೬ರಿಂದ ೯ ರವರೆಗೆ ಜರುಗಿದ ಸಿಲ್ಹೌಟ್ಟೀಸ್-೨೦೨೬ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಕ್ರೀಡಾಕೂಟದಲ್ಲಿ ವಿವಿಯ ಒಟ್ಟು ೪೪ ವಿದ್ಯಾರ್ಥಿಗಳ ತಂಡ ಅಥ್ಲೆಟಿಕ್ಸ್‌, ಕ್ರಿಕೆಟ್, ಫುಟ್‌ಬಾಲï ಹಾಗೂ ವಾಲಿಬಾಲ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದೆ. ಅಥ್ಲೆಟಿಕ್ಸ್‌ ವಿಭಾಗದ ರಿಲೇ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಮೂರು ವಿಭಾಗಗಳಲ್ಲಿ ಬೆಳ್ಳಿ ಪದಕ ಗೆದ್ದು ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದ್ದಾರೆ.
೪*೧೦೦ ಮೀ. ರಿಲೇ ಮಹಿಳಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಡೆಲಿಲಾ, ಸುಹಾನಿ, ತೇಜಸ್ವಿನಿ ಹಾಗೂ ರೇಖಾ ಅವರನ್ನೊಳಗೊಂಡ ತಂಡ ಉತ್ತಮ ಪ್ರದರ್ಶನ ನೀಡಿದೆ. ೪*೪೦೦ ಮೀ. ರಿಲೇ ಪುರುಷರ ವಿಭಾಗದಲ್ಲಿ ಮಿಥಾನ್ಶು ಪಾಟೀಲ, ಹರ್ಷ, ಪದ್ಮೇಶ ಪಾಟೀಲ ಹಾಗೂ ವಿಜಯ ಲಾಂಡೆ ಅವರಿದ್ದ ತಂಡ ದ್ವಿತೀಯ ಸ್ಥಾನ ಹಾಗೂ ೪*೧೦೦ ಮೀ. ರಿಲೇ ಪುರುಷರ ವಿಭಾಗದಲ್ಲಿ ಮಿಥಾನ್ಶು ಪಾಟೀಲ, ಹರ್ಷ, ಪದ್ಮೇಶ ಪಾಟೀಲ ಹಾಗೂ ಪ್ರಣವ ಅವರಿದ್ದ ತಂಡ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ.
ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಡೀಮ್ಡ್ ವಿವಿ ಸಮಕುಲಾಧಿಪತಿ ವೈ.ಎಂ. ಜಯರಾಜ, ಕುಲಪತಿ ಅರುಣ ಇನಾಮದಾರ, ಕುಲಸಚಿವ ರಿಜಿಸ್ಟಾರ್ ಆರ್.ವಿ. ಕುಲಕರ್ಣಿ, ವೈದ್ಯಕೀಯ ವಿಭಾಗದ ಡೀನ್ ತೇಜಸ್ವಿನಿ ವಲ್ಲಭ, ಅಲೈಡ್ ಹೆಲ್ತ್‌ ಸೈನ್ಸಸ್ ವಿಭಾಗದ ಡೀನ್ ಎಸ್.ವಿ. ಪಾಟೀಲ, ಕ್ರೀಡಾ ವಿಭಾಗದ ಡೀನ್ ಗಿರೀಶ ಕುಂತ್ರಳ್ಳಿ, ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕಿ ಮಹಾದೇವಿ ವಾಲಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net