ವಿಜಯಪುರ: ‘ಕಲ್ಯಾಣದಲ್ಲಿ 1.96 ಲಕ್ಷ ಶರಣರ ಕಗ್ಗೊಲೆ ಎನ್ನುತ್ತಾರೆ, ಅಂದಿನ ಕಾಲದಲ್ಲಿ ಕಲ್ಯಾಣದಲ್ಲಿ ಅಷ್ಟೊಂದು ಜನಸಂಖ್ಯೆ ಇತ್ತಾ? ಶರಣರ 180 ಕೋಟಿ ವಚನಗಳನ್ನು ಸುಟ್ಟರು ಎನ್ನುತ್ತಾರೆ, ಅಷ್ಟು ವಚನ ಬರೆಯಲು ಎಷ್ಟು ಸಮಯ ಬೇಕಾಗುತ್ತದೆ ಗೊತ್ತಾ? ಬಸವಣ್ಣನವರು ಕಲ್ಯಾಣದಲ್ಲಿದ್ದಿದ್ದು ಕೇವಲ ಆರು ವರ್ಷ ಹೀಗಾಗಿ ಅಷ್ಟು ಅವಧಿಯಲ್ಲಿ ಇಷ್ಟೆಲ್ಲ ಘಟಿಸಲು ಸಾಧ್ಯವೇ? ಶರಣರನ್ನು ಹಿಂದುಗಳು ಕಗ್ಗೊಲೆ ಮಾಡಿದರು ಎನ್ನುತ್ತಾರೆ, ಬಿಜ್ಜಳ ಜೈನ ಧರ್ಮದ ಅನುಯಾಯಿ ಹೀಗಾಗಿ ಅಹಿಂಸೆ ಪ್ರತಿಪಾದಕರಾಗಿರುವ ಜೈನರು ಹಿಂಸೆ ಮಾಡಲು ಸಾಧ್ಯವೇ? ಎಂದು ಬಿಜೆಪಿ ಮುಖಂಡರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.