ಆಲಮೇಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧೀಕ ಸುಂಬಡ ಮಾತನಾಡಿದರು. ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವಾಲಿಕಾರ, ತಾಪಂ ಮಾಜಿ ಸದಸ್ಯ ಬಸವರಾಜ ತೆಲ್ಲೂರ, ಪಪಂ ಸದಸ್ಯ ಭಾಗ್ಯವಂತ ಆಲಮೇಲಕರ ಇದ್ದರು.
ಆಲಮೇಲ: ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ 39.90 ಕೋಟಿ ರೂ.ವೆಚ್ಚದ ತೋಟಗಾರಿಕೆ ವಿಶ್ವ ವಿದ್ಯಾಲಯದ ಹಾಗೂ 44.50 ಕೋಟಿ ರೂ. ಕಡಣಿ ಗ್ರಾಮದ ಭೀಮಾ ನದಿಗೆ ಬ್ರೀಡ್ಜ್ ನಿರ್ಮಾಣ ಕಾಮಗಾರಿ ಭೂಮಿ ಪೂಜೆ, ಹಾಗೂ 20 ಕೋಟಿ ರೂ. ವೆಚ್ಚದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಕಲಬುರಗಿ ರಸ್ತೆಯ ಬಡದಾಳ ಪಂಪಿನವರೆಗೆ ರಸ್ತೆ ಅಗಲೀಕರಣ ಹಾಗೂ ರಸ್ತೆ, ಬೀದಿ ದೀಪಗಳ ಉದ್ಘಾಟನೆ ಕಾರ್ಯಕ್ರಮ ಜೂ.25ರಂದು ನಡೆಯಲಿದೆ ಎಂದು ಪಪಂ ಅಧ್ಯಕ್ಷ ಸಾಧಿಕ ಸುಂಬಡ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1.86 ಕೋಟಿ ರೂ. ವೆಚ್ಛದಲ್ಲಿ ಪಟ್ಟಣದ ಕಡಣಿ ಕ್ರಾಸ್‌ನಿಂದ ವಿರಕ್ತಮಠದವರೆಗೆ ರಸ್ತೆ ಹಾಗೂ ಚರಂಡಿ ನಿರ್ಮಾಣ, 1.53 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ದೇವಣಗಾಂವ ಮುಖ್ಯ ರಸ್ತೆಯಿಂದ ಮೇನ್ ಬಜಾರವರೆಗೆ ಚರಂಡಿ ಹಾಗೂ ರಸ್ತೆ ನಿರ್ಮಾಣ, ಹಾಗೂ 3 ಕೋಟಿ ರೂ. ವೆಚ್ಚದ ತಾಲೂಕು ಕ್ರೀಡಾಂಗಣ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೆ ಸಚಿವರಾದ ಸತೀಶ ಜಾರಕಿಹೊಳಿ, ಡಾ. ಎಂ.ಬಿ.ಪಾಟೀಲ, ಶಾಸಕ ಅಶೋಕ ಮನಗೂಳಿ ಸೇರಿ ಪಕ್ಷದ ಶಾಸಕರು ಹಾಗೂ ಮುಖಂಡರು ಪಟ್ಟಣಕ್ಕೆ ಆಗಮಿಸಲ್ಲಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವಾಲಿಕಾರ, ತಾಪಂ ಮಾಜಿ ಸದಸ್ಯ ಬಸವರಾಜ ತೆಲ್ಲೂರ, ಪಪಂ ಸದಸ್ಯ ಭಾಗ್ಯವಂತ ಆಲಮೇಲಕರ, ಮುಖಂಡರಾದ ಭೀಮಶ್ಯಾ ಬಮ್ಮನಹಳ್ಳಿ, ಪ್ರಶಾಂತ ನಾಶಿ, ಶಿವು ರಜಪೂತ ಇದ್ದರು.