ಮಾತೆತ್ತಿದರೆ ಮೋದಿ ಏನು ಮಾಡ್ಯಾನ? ಎಂದು ಕಾಂಗ್ರೆಸ್‌ನವರು ಟೀಕಿಸುತ್ತಾರೆ. ನೀವು ಅವರಿಗೆ ‘ಮೋದಿ ನೀವು ರೊಕ್ಕ ತಿನ್ನುವುದನ್ನು ತಡೆದಿದ್ದಾನೆ’ ಎಂದು ಹೇಳಿ, ಅಲ್ಲದೇ, ‘ಮೋದಿ ದೇಶದ ಅಭಿವೃದ್ಧಿ ಮಾಡಿದ್ದಾನೆ, ರೈತರ ಆದಾಯ ಹೆಚ್ಚಿಸಿದ್ದಾನೆ, ರೈಲ್ವೆ, ಬಂದರು, ವಾಯು ಸಾರಿಗೆ, ಸೈನ್ಯದ ಬಲವರ್ಧನೆ ಮಾಡಿದ್ದಾನೆ’ ಎಂದು ಹೆಮ್ಮೆಯಿಂದ ಉತ್ತರ ಕೊಡಿ ಎಂದು ಜಿಗಜಿಣಗಿ ಕಾರ್ಯಕರ್ತರಿಗೆ ಕರೆ ನೀಡಿದರು.