ಪೂರ್ಣ ಮನಸ್ಸಿನಿಂದ ಅಧ್ಯಯನಶೀಲರಾಗಿ

ವಿಜಯಪುರದ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಾ. ಎ.ಎಸ್. ಹಿಪ್ಪರಗಿ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಸ್.ಎಂ. ಶೇಖ ಮಾತನಾಡಿದರು. ವಿ.ವಿ. ಮಳಗಿ, ವೈ. ತಮ್ಮಣ, ವಿ.ಡಿ.  ಐಹೊಳ್ಳಿ ಮತ್ತಿತರರಿದ್ದಾರೆ.
ವಿಜಯಪುರದ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಾ. ಎ.ಎಸ್. ಹಿಪ್ಪರಗಿ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಸ್.ಎಂ. ಶೇಖ ಮಾತನಾಡಿದರು. ವಿ.ವಿ. ಮಳಗಿ, ವೈ. ತಮ್ಮಣ, ವಿ.ಡಿ. ಐಹೊಳ್ಳಿ ಮತ್ತಿತರರಿದ್ದಾರೆ.
Published on
ವಿಜಯಪುರ: ನಿರಂತರ ಅಧ್ಯಯನಶೀಲರಾಗುವ ಮೂಲಕ ಸಾಹಿತ್ಯದ ವಿವಿಧ ಪ್ರಕಾರದ ಅರ್ಥವನ್ನು ಪೂರ್ಣ ಮನಸ್ಸಿನಿಂದ ಗ್ರಹಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಂ. ಶೇಖ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಾ. ಎ.ಎಸ್. ಹಿಪ್ಪರಗಿ ಪ್ರತಿಷ್ಠಾನದ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಓದು ಮಸ್ತಕದಿಂದ ಮಸ್ತಿಷ್ಕದವರೆಗೆ ಇಳಿದಾಗ ಜೀವನ ಪಾವನವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ವಿ.ವಿ. ಮಳಗಿ ಮಾತನಾಡಿ, ಪ್ರಯತ್ನವು ಮತ್ತು ತೀವ್ರ ಹಂಬಲವನ್ನು ಹೊಂದಿ ಎ.ಎಸ್. ಹಿಪ್ಪರಗಿಯವರಂತೆ ನೀವಾಗಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ವೈ. ತಮ್ಮಣ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಕುಂತಲಾ ಮೋಸಲಗಿ, ಶಿವಾನಂದ ಇಂಗಳೇಶ್ವರ ಮತ್ತು ಮಹಾಂತೇಶ ಅಂಗಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ವಿದ್ಯಾರ್ಥಿನಿಯರಿಂದ ವಚನ ಗಾಯನ ನಡೆಯಿತು. ಡಾ. ವಿ.ಡಿ. ಐಹೊಳ್ಳಿ ಸ್ವಾಗತಿಸಿ, ಪರಿಚಯಿಸಿದರು. ಎಸ್.ಎನ್. ಶಿವಣಗಿ ಸಾಧಕರ ಕುರಿತು ಪರಿಚಯಿಸಿದರು. ದೀಪಾ ಲಗಳಿ ನಿರೂಪಿಸಿದರು. ಸಂಗಮೇಶ ಬದಾಮಿ ವಂದಿಸಿದರು.
ವಿ.ಸಿ. ನಾಗಠಾಣ, ಎಸ್.ಬಿ. ದೊಡಮನಿ, ಬಿ.ಕೆ. ಗೋಟ್ಯಾಳ, ಜಿ.ಬಿ. ಸಾಲಕ್ಕಿ, ಎಸ್.ಎಂ. ಸಾತಲಗಾಂವ, ಆರ್.ಎಸ್. ಬಿರಾದಾರ, ವಿವೇಕ ಬೀಳಗಿ, ಡಿ.ಬಿ. ಕೊಟ್ಟಗಿ, ಸುಭಾಸ ಯಾದವಾಡ, ಶರಣಗೌಡ ಪಾಟೀಲ, ಅಶೋಕ ಹಿಪ್ಪರಗಿ ವಿದ್ಯಾವತಿ ಅಂಕಲಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net