24ರಂದು ಬೆಂಗಳೂರು ಚಲೋ

ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಸರ್ದಾರ ಸೇವಾಲಾಲ ಸ್ವಾಮೀಜಿ, ಇಮ್ಮಡಿ ಸಿದ್ರಾಮೇಶ್ವರ ಸ್ವಾಮೀಜಿ, ಮಹೇಂದ್ರ ನಾಯಕ ಮತ್ತಿತರರಿದ್ದಾರೆ.
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಸರ್ದಾರ ಸೇವಾಲಾಲ ಸ್ವಾಮೀಜಿ, ಇಮ್ಮಡಿ ಸಿದ್ರಾಮೇಶ್ವರ ಸ್ವಾಮೀಜಿ, ಮಹೇಂದ್ರ ನಾಯಕ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಒಳಮೀಸಲಾತಿ ಜಾರಿ ವಿರೋಧಿಸಿ
  • ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಪ್ರತಿಭಟನೆ
ವಿಜಯಪುರ: ಒಳಮೀಸಲಾತಿ ಜಾರಿ ವಿರೋಧಿಸಿ ಮಾ.24 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸರ್ದಾರ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಳಮೀಸಲಾತಿ ಜಾರಿಯಿಂದ ಅನ್ಯಾಯಕ್ಕೊಳಗಾಗುವ ಸಮುದಾಯಗಳ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಸಾತ್ವಿಕ ಹೋರಾಟದ ಹೋರಾಟದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮ್ಮ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ನಮ್ಮ ಸಮಾಜಗಳನ್ನು ಮೀಸಲಾತಿಯಿಂದ ಹೊರಗಿಡುವ ಷಡ್ಯಂತ್ರ ನಡೆಯುತ್ತಿದೆ. ಬಂಜಾರ ಮತ್ತು ಭೋವಿ ಸಮಾಜವನ್ನು ಗುರಿ ಮಾಡಲಾಗುತ್ತಿದ್ದು, ಮೀಸಲಾತಿಯಿಂದ ರಾಜಕೀಯಕ್ಕೆ ಅಡ್ಡಿ ಬರುತ್ತಾರೆ. ಇವರು ಶಾಸಕರು, ಮಂತ್ರಿಗಳಾಗುತ್ತಾರೆ ಎಂಬ ಭಯ ಕಾಡುತ್ತಿದೆ ಎಂದರು.
ನಾವು ಅಸ್ಪೃಶ್ಯರು, ನಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ, ಹೊರಗಿಡುತ್ತಾರೆ ಎನ್ನವ ಮಾತನ್ನು ಹೇಳುತ್ತಾರೆ. ಆದರೆ ಕೇಂದ್ರದಲ್ಲಿ ನಾರಾಯಣಸ್ವಾಮಿ, ರಾಜ್ಯದಲ್ಲಿ ಎಚ್. ಆಂಜನೇಯ, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ ಅವರು ಹೇಗೆ ಸಚಿವರಾದರೂ? ಅವರು ಅಸ್ಪೃಶ್ಯರಾ ಎಂದು ಪ್ರಶ್ನಿಸಿದರಲ್ಲದೇ. ಬಂಜಾರ, ಭೋವಿ ಸಮಾಜಗಳು ನಿಜವಾದ ಅಸ್ಪೃಶ್ಯ ಸಮುದಾಯಗಳು, ಇವತ್ತಿಗೂ ಹಳ್ಳಿಗಳಲ್ಲಿ ಕೈ ಒಡ್ಡಿ ನೀರು ಕುಡಿಯುವಂತಹ ಪರಿಸ್ಥಿತಿ ಇದೆ ಎಂದರು.
ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಬಾರದು. ಈಗಾಗಲೇ ಹಿಂದಿನ ಸರ್ಕಾರಕ್ಕೆ ನಾವು ಪಾಠ ಕಲಿಸಿದ್ದೇವೆ. ಬೊಮ್ಮಾಯಿ ಸರ್ಕಾರಕ್ಕೆ ಉತ್ತರ ನೀಡಿದಂತೆ ಸದ್ಯದ ಸರ್ಕಾರ ಅದೇ ಹಾದಿಯಲ್ಲಿ ಮುಂದುವರೆದರೆ ಅದಕ್ಕೂ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.
ಮುಖಂಡ ಆದರ್ಶ ಯಲ್ಲಪ್ಪ ಮಾತನಾಡಿ, ಒಳಮೀಸಲಾತಿ ಜಾರಿ ಸಂದರ್ಭದಲ್ಲಿ ಎ,ಬಿ,ಸಿ ಎಂಬ ಗುಂಪುಗಳನ್ನು ಮಾಡಲಾಗಿದ್ದು, ಭೋವಿ, ಲಂಬಾಣಿ, ಕೊರಮ, ಕೊರಚ, ಸುಡಗಾಡು ಸಿದ್ದ ಸೇರಿ ಹಲವು ಸೂಕ್ಷ್ಮ, ಅತೀಸೂಕ್ಷ್ಮ ಸಮುದಾಯಗಳನ್ನು ಸಿ ಗುಂಪಿನಲ್ಲಿ ಸೇರಿಸಲಾಗಿದೆ. ಈ ಸಮುದಾಯಗಳಿಗೆ ಹೆಚ್ಚಿನ ಅಸ್ಪೃಶ್ಯತೆ ಇದೆ. ಇವತ್ತಿಗೂ ಕೂಡ ಈ ಸಮುದಾಯಗಳು ಕಳಂಕಿತ ಸಮುದಾಯಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರೆ. 1950ರಿಂದ ಅತಿಹೆಚ್ಚು ಹಿಂದುಳಿದ ಸಮುದಾಯಗಳು ಯಾವುದಾದರೂ ಇದ್ದರೆ ಅದು ಸಿ ಗುಂಪಿನಲ್ಲಿರುವ ಸಮುದಾಯಗಳು. ಈ ಸಮುದಾಯಗಳಿಗೆ ಈವರೆಗೂ ಮೀಸಲಾತಿ ಸಮಪರ್ಕವಾಗಿ ತಲುಪೇ ಇಲ್ಲ, ಹೀಗಾಗಿ ಒಳಮೀಸಲಾತಿ ವಿಚಾರ ಮರುಪರಿಶೀಲನೆ ಮಾಡಿ ತಜ್ಞರ ಸಮಿತಿ ರಚಿಸಿ ನಮ್ಮ ಅಹವಾಲುಗಳನ್ನು ಸರ್ಕಾರದ ಮುಂದೆ ಇಡಲು ಅವಕಾಶ ಕಲ್ಪಸಿ ನಂತರ ಪರಿಶೀಲನೆ ಮಾಡಿ ಸಿ ಗುಂಪಿನಲ್ಲಿರುವ ಸಮುದಾಯಗಳನ್ನು ಎ ಗುಂಪಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ರಾಮೇಶ್ವರ ಸ್ವಾಮೀಜಿ, ಗೋಪಾಲ ಮಹಾರಾಜ, ನ್ಯಾಯವಾದಿ ಅನಂತ ನಾಯಕ, ಮಹೇಂದ್ರ ನಾಯಕ, ಪ್ರಕಾಶ ಚವಾಣ್‌ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net