ವಿಜಯಪುರ ಜಿಲ್ಲಾ ಕುರಿಗಾರರ ಸಂಘದ ಪದಾಽಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಪರ ಜಿಲ್ಲಾಽಕಾರಿ ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು. ಮೋಹನ ಮೇಟಿ, ದೇವಕಾಂತ ಬಿಜ್ಜರಗಿ, ಮೋಹನ ದಳವಾಯಿ ಮತ್ತಿತರರಿದ್ದಾರೆ.
ವಿಜಯಪುರ: ಕುರಿಗಾರರ ಮೇಲೆ ಹಲ್ಲೆ ತಡೆಗಟ್ಟುವ ಹಾಗೂ ಕುರಿಗಾರರಿಗೆ ಬಜೆಟ್‌ನಲ್ಲಿ 500 ಕೋಟಿ ರೂಪಾಯಿ ಮೀಸಲಿಡುವಂತೆ ಒತ್ತಾಯಿಸಿ ಜಿಲ್ಲಾ ಕುರಿಗಾರರ ಸಂಘದ ವತಿಯಿಂದ ಶುಕ್ರವಾರ ಅಪರ ಜಿಲ್ಲಾಽಕಾರಿ ಔದ್ರಾಮ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಬೀರಪ್ಪ ಜುಮನಾಳ ಮಾತನಾಡಿ, ಕುರಿಗಾರರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಖಂಡನಾರ್ಹ. ತಿಕೋಟಾ ತಾಲೂಕಿನ ಮಾನೇನ ದೊಡ್ಡಿಯ ಸಂಚಾರಿ ಕುರಿಗಾರರಾದ ಪಾಂಡು ಅರ್ಜುನ ಸುಳ್ಳ ಹಾಗೂ ಕುಟುಂಬದೊಂದಿಗೆ ಕಲ್ಬುರ್ಗಿ ಜಿಲ್ಲೆಯ ಖಜೂರಿ ಗ್ರಾಮದಲ್ಲಿ ಬೆಳೆ ಇಲ್ಲದ ಹೊಲದಲ್ಲಿ ಕುರಿಗಳನ್ನು ಬಿಟ್ಟಾಗ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಅಂತಹ ಘಟನೆಗಳು ನಡೆದಿದ್ದರೂ ಸಂಬAಽಸಿದ ಅಽಕಾರಿಗಳು, ಜನ ಪ್ರತಿನಿಽಗಳು ಅವರ ಕುಟುಂಬಕ್ಕೆ ಕನಿಷ್ಠ ಪಕ್ಷ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕುರಿಗಾರರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಸಂಚಾರಿ ಕುರಿಗಾರರಿಗೆ ಹಾಗೂ ಕುರಿಗಾರರಿಗೆ ಬಂದೂಕು ಲೈಸನ್ಸ್ ನೀಡಬೇಕು.
ಅಲ್ಲದೆ, ಕುರಿಗಾರರ ಹಲ್ಲೆಗೊಳಗಾದ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಹಾಗೂ ಆತನ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡುವುದು, ಅಲ್ಲದೆ, ಮುಂಬರುವ ರಾಜ್ಯ ಬಜೆಟ್‌ನಲ್ಲಿ ಕುರಿಗಾರರಿಗೆ 500 ಕೋಟಿ ರೂಪಾಯಿ ಮೀಸಲಿಡುವುದು ಸೇರಿ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.