ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಕಲೆ ಸಹಕಾರಿ

ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ `ಕಲಾ ತರಬೇತಿ ಸಮಾರೋಪ' ಸಮಾರಂಭವನ್ನು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬಿ.ಜೆ. ಇಂಡಿ, ಆರ್.ಬಿ. ನಾಯ್ಕ್, ಸಂತೋಷ ಭೋವಿ ಇತರರಿದ್ದಾರೆ.
ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ `ಕಲಾ ತರಬೇತಿ ಸಮಾರೋಪ' ಸಮಾರಂಭವನ್ನು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬಿ.ಜೆ. ಇಂಡಿ, ಆರ್.ಬಿ. ನಾಯ್ಕ್, ಸಂತೋಷ ಭೋವಿ ಇತರರಿದ್ದಾರೆ.
Published on
ಕಲೆ ಎನ್ನುವುದು ದೊಡ್ಡ ಶಕ್ತಿ. ವಸತಿ ನಿಲಯದ ಮುದ್ದು ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ ಕಲೆ, ಸಂಸ್ಕೃತಿ, ಕ್ರೀಡೆ ಸೇರಿ ಸರ್ವಾಂಗೀಣವಾಗಿ ಬೆಳವಣಿಗೆಯಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಇತ್ತೀಚಗೆ ಹಮ್ಮಿಕೊಂಡಿದ್ದ `ಕಲಾ ತರಬೇತಿ ಸಮಾರೋಪ' ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೃತ್ಯ ಕಲಿಯಲು ಅವಕಾಶ ಮಾಡಿಕೊಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕ ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸದಸ್ಯ ಆರ್.ಬಿ. ನಾಯ್ಕ್ ಮಾತನಾಡಿ, ನೃತ್ಯ ಕಲೆಗೆ ಜಗತ್ತಿನ ಎಲ್ಲ ಕಡೆಗೆ ಸ್ಥಾನಮಾನವಿದೆ ಎಂದು ಹೇಳಿದರು. ತಾವು ಸಹ ಲಂಬಾಣಿ ನೃತ್ಯದ ತರಬೇತಿ ನೀಡಿ ಬೆಂಗಳೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಲಂಬಾಣಿ ನೃತ್ಯದ ತರಬೇತಿ ನೀಡಿದ್ದು ಆ ತಂಡವು ಅಮೆರಿಕದಲ್ಲಿ ನಡೆದ 'ಅಕ್ಕಬಳಗ' ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಆಯ್ಕೆಯಾಗಿರುವ ವಿಷಯವನ್ನು ತಿಳಿಸಿದರು.
ಮುಂದುವರಿದು ತಮ್ಮ ಕಲಾ ಸೇವೆ ಗುರುತಿಸಿ ರಾಜ್ಯ ಸರ್ಕಾರವು ತಮಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದನ್ನು ಸ್ಮರಿಸಿದರು.
ಕರ್ನಾಟಕ ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸದಸ್ಯೆ ಸುರೇಖಾ ಲಮಾಣಿ ಮಾತನಾಡಿ, ದೇವನೂರು ಮಹಾದೇವಪ್ಪ ಅವರು ಹೇಳಿದಂತೆ `ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಯಾವತ್ತಿಗೂ ಫಲ ಕೊಡುತ್ತದೆ' ಎನ್ನುವಂತೆ ಅಕ್ಷರದ ಜೊತೆ ಜೊತೆಗೆ ಮಕ್ಕಳಿಗೆ ನೃತ್ಯದ ತರಬೇತಿ ನೀಡಿದ್ದು, ಈ ತರಬೇತಿ ಜೀವನದಲ್ಲಿ ಮುಂದುವರೆಸಿಕೊಡು ಉನ್ನತ ಮಟ್ಟದಲ್ಲಿ ಬೆಳೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಬಿ.ಜೆ. ಇಂಡಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು. ಮೋಹನ ಕಟ್ಟಿಮನಿ ನಿರೂಪಿಸಿದರು.
ಶಿರೀನ್ ಕೌಸರ, ಮೀನಾಕ್ಷಿ ಮಠಪತಿ, ನೃತ್ಯ ತರಬೇತುದಾರ ರಂಗನಾಥ ಬತ್ತಾಸಿ ಹಾಗೂ ರೋಹಿಣಿ ತಳವಾರ, ಪೂರ್ವಿ ತಳವಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net