ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಈ ಮಾತು ಸ್ವತಃ ಎಲ್.ಕೆ. ಅದ್ವಾನಿಯವರೇ ಹೇಳಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಂಡು ರಾಜ್ಯವನ್ನು ಆಳುವ ಪ್ರಯತ್ನ ನಡೆಯುತ್ತಿದೆ, ಐಟಿ-ಇಡಿ ಮೊದಲಾದವುಗಳ ದುರಪಯೋಗ ಆದರೆ ದೇಶ ಎತ್ತ ಸಾಗಬೇಕು? ಎಂದ ಶಾಸಕರು, ನಿಮ್ಮಲ್ಲಿ ಆರ್ಥಿಕತೆ ನಿಭಾಯಿಸುವ ಸಾಮರ್ಥ್ಯ ಇಲ್ಲದೇ ಇದ್ದರೆ ಬಿಡಬೇಕು. ಆದರೂ ಅಂಧ ಭಕ್ತರು ವಿಶ್ವಗುರು ಎನ್ನುತ್ತಾರೆ. ದೇಶವನ್ನೇ ನಡೆಸಲಾಗದವರು ಎಂಥ ವಿಶ್ವ ಗುರು ಎಂದರು.