ಹಿಂದೂಗಳ ಆರಾಧ್ಯ ದೈವವಾದ ಗೋಮಾತೆಯನ್ನು ಬಕ್ರೀದ್ ಹಬ್ಬದಂದು ಗೋ ಹತ್ಯೆ ಮಾಡದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಪ್ರಖಂಡ ಸಮಿತಿ ಇಂಡಿ ವತಿಯಿಂದ ಡಿವೈಎಸ್‌ಪಿ ಸದಾಶಿವ ಕಟ್ಟಿಮನಿಗೆ ಮನವಿ ಸಲ್ಲಿಸಲಾಯಿತು. ವಿಠ್ಠಲ ಹೊಸಮನಿ, ನೇತಾಜಿ ಪವಾರ, ಪ್ರಕಾಶ ಬಿರಾದಾರ ಮತ್ತಿತರರಿದ್ದರು.
Published on:
Copied
Follow Us
ಇಂಡಿ: ಹಿಂದೂಗಳ ಆರಾಧ್ಯ ದೈವ ಗೋಮಾತೆಯನ್ನು ಬಕ್ರೀದ್ ಹಬ್ಬದಂದು ಗೋಹತ್ಯೆ ಮಾಡದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಪ್ರಖಂಡ ಸಮಿತಿ ವತಿಯಿಂದ ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷತ್ ನಗರ ಘಟಕದ ಅಧ್ಯಕ್ಷ ನೇತಾಜಿ ಪವಾರ, ಹಾಗೂ ಜಿಲ್ಲಾ ಮುಖಂಡ ಪ್ರಕಾಶ ಬಿರಾದಾರ ಮಾತನಾಡಿ, ಭಾರತ ದೇಶದಲ್ಲಿ ಗೋಮಾತೆಗೆ ತಾಯಿಗಿಂತ ಹೆಚ್ಚಿನ ಸ್ಥಾನ ನೀಡಲಾಗಿದೆ.
ಗೋಮಾತೆಯಲ್ಲಿ ಮುಕ್ಕೋಟಿ ದೇವರುಗಳು ಇವೆ ಎಂದು ಹಿಂದೂಗಳು ನಂಬಿದ್ದಾರೆ. ಜಾತ್ಯತೀತವಾಗಿ ಧರ್ಮಾತೀತವಾಗಿ ಇಡೀ ಮಾನವ ಜನಾಂಗಕ್ಕೆ ಹಾಲಿನ ರೂಪದಲ್ಲಿ ಸದಾ ಅಮೃತವನ್ನು ಕೊಡುತ್ತಿರುವ ಪವಿತ್ರವಾದ ಹಸುಗಳನ್ನು ಬಕ್ರೀದ್ ಹಬ್ಬದಂದು ಕಡಿದು ತಿನ್ನುತ್ತಾರೆ. ಹೀಗಾಗಿ ಹಸುಗಳನ್ನು ಎಲ್ಲಿಯೂ ಬಲಿ ಕೊಡದಂತೆ ಪೊಲೀಸ್ ಇಲಾಖೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ನಗರ ಘಟಕದ ಉಪಾಧ್ಯಕ್ಷ ವಿಠ್ಠಲ ಹೊಸಮನಿ ಇದ್ದರು.