ಜನಿವಾರ ತೆಗೆಸಿದ ಕ್ರಮ ಖಂಡಿಸಿ ಮನವಿ

ವಿಜಯಪುರ ನಗರದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಜನಿವಾರ ತೆಗೆಸಿದ ಕ್ರಮ ಖಂಡಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು. ಗೋವಿಂದ ದೇಶಪಾಂಡೆ,  ಗುರುರಾಜ ಜೋಶಿ, ಶಾರದಾ ಪತ್ತಾರ ಮತ್ತಿತರರಿದ್ದಾರೆ.
ವಿಜಯಪುರ ನಗರದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಜನಿವಾರ ತೆಗೆಸಿದ ಕ್ರಮ ಖಂಡಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು. ಗೋವಿಂದ ದೇಶಪಾಂಡೆ, ಗುರುರಾಜ ಜೋಶಿ, ಶಾರದಾ ಪತ್ತಾರ ಮತ್ತಿತರರಿದ್ದಾರೆ.
Published on
ವಿಜಯವಾಣಿ ಸುದ್ದಿಜಾಲ, ವಿಜಯಪುರ
ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆದ ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಜನಿವಾರ ತೆಗೆಸಿದ ಕ್ರಮ ಖಂಡಿಸಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಹಾಸಭಾ, ಮೌನೇಶ್ವರ ಫೌಂಡೇಶನ್ ಹಾಗೂ ಕಾಳಿಕಾ ದೇವಿ ದೇವಸ್ಥಾನ ಮಹಿಳಾ ಮಂಡಳಿಯ ಪದಾಧಿಕಾರಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೃಷ್ಣಾಜಿ ಕುಲಕರ್ಣಿ ಮಾತನಾಡಿ, ಜನಿವಾರವೂ ಉಪನಯನದ ನಂತರ ಜನಿವಾರ ಧರಿಸುವ ಪವಿತ್ರ ದಾರವಾಗಿದೆ. ಅದು ಹತ್ತಾರು ಮಂತ್ರಗಳಿಂದ ಮಂತ್ರಿಸಿ ನಮ್ಮ ರಕ್ಷಣೆಗಾಗಿ ಇರುವ ದೇವಿಯ ಸ್ವರೂಪ, ಅದು ನಮ್ಮೆಲ್ಲ ಸಮಾಜಗಳ ನಂಬಿಕೆ ಹಾಗೂ ಗೌರವವಾಗಿದೆ. ಅಂತಹ ಬ್ರಹ್ಮ ತೇಜಸ್ಸಿನ ಜನಿವಾರವನ್ನು ವಿದ್ಯಾರ್ಥಿಯಿಂದ ತೆಗೆಸಿದ್ದು ನಮ್ಮ ಸಮಾಜದ ಗೌರವಕ್ಕೆ ತಂದ ಧಕ್ಕೆಯಾಗಿದೆ. ಅಂತಹ ಅಹಿತಕರ ಘಟನೆಯನ್ನು ನಮ್ಮ ಸನಾತನ ಹಿಂದು ಸಮಾಜ ಸಹಿಸುವುದಿಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.
ಕಾಳಿಕಾ ದೇವಿ ದೇವಸ್ಥಾನ ಮಹಿಳಾ ಸಂಘದ ಅಧ್ಯಕ್ಷೆ ಮೀನಾ ಕುಂದನಗಾರ, ರೈತಪರ ಹೋರಾಟಗಾರ ಅರವಿಂದ ಕುಲಕರ್ಣಿ ಹಾಗೂ ಮೌನೇಶ್ವರ -ಫೌಂಡೇಶನ್ ಅಧ್ಯಕ್ಷ ವಿನೋದ ಪತ್ತಾರ ಮಾತನಾಡಿದರು.
ಬ್ರಾಹ್ಮಣ ಸಮಾಜದ ಮುಖಂಡರಾದ ವಿವೇಕ ತಾವರಗೇರಿ, ಗೋವಿಂದ ದೇಶಪಾಂಡೆ, ಮಹಾಸಭಾದ ಜಿಲ್ಲಾಧ್ಯಕ್ಷ ಗುರುರಾಜ ಜೋಶಿ, ವಿಲಾಸ ಕುಲಕರ್ಣಿ, ರವಿ ಕುಲಕರ್ಣಿ, ನಾರಾಯಣ ಕುಲಕರ್ಣಿ, ವಿನಾಯಕ ಕುಂದನಗಾರ, ರಾಧಾ ಕುಲಕರ್ಣಿ, ಜಯಶ್ರೀ ಇಂಗಳೇಶ್ವರ, ರೂಪಾ ಕುಲಕರ್ಣಿ, ವಂದನಾ ನಾಯಕ, ಶಾರದಾ ಪತ್ತಾರ, ಕಾಳಮ್ಮ ಪತ್ತಾರ, ಮಂಜುಳಾ ಮುತ್ತಗಿಕರ, ಹೇಮಾ ಪತ್ತಾರ, ಮಹಾದೇವಿ ಪತ್ತಾರ, ಇಂದುಮತಿ ವಿಜಾಪುರಕರ, ಲಕ್ಷ್ಮೀ ಕೆಂದೂರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net