ಸಿಂದಗಿ ನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಶರಣಪ್ಪ ಸುಣಗಾರ ಉದ್ಘಾಟಿಸಿದರು. ಸಂಗಪಾಲ ಬಂತೇಜಿ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ರಮೇಶ ಭೂಸನೂರ, ಶಾಂತವೀರ ಬಿರಾದಾರ ಇತರರಿದ್ದರು.
ಸಿಂದಗಿ: ಭಾರತೀಯರಲ್ಲಿ ಸಮಾನತೆ ಮತ್ತು ಶಿಕ್ಷಣದ ಕನಸು ಕಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಯೊಬ್ಬರಲ್ಲೂ ಪ್ರಜ್ವಲಿಸಬೇಕು ಎಂದು ಮಾಜಿ ಶಾಸಕ ಎಸ್.ಟಿ. ಸುಣಗಾರ ಹೇಳಿದರು.
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಯಂತ್ಯುತ್ಸವ ಸಮಿತಿ, ಜೈಭೀಮ ನಗರ ಹಾಗೂ ದಲಿತ ಮತ್ತು ಎಸ್ಸಿ, ಎಸ್ಟಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ೧೩೫ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಲಿತರು ಎಲ್ಲ ವರ್ಗದವರೊಂದಿಗೆ ಸೌಜನ್ಯರಾಗಿ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಮುಂದಾಳತ್ವದೊಂದಿಗೆ ಸಂಘಟನಾತ್ಮಕವಾಗಿ ಒಗ್ಗೂಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ರಮೇಶ ಭೂಸನೂರ, ಶಿಕ್ಷಣದಿಂದ ಅಸ್ಪೃಷ್ಯತೆ, ಜಾತೀಯತೆ ತೊಲಗಲು ಸಾಧ್ಯ. ಅಂಬೇಡ್ಕರರು ಬಯಸಿದಂತೆ ಮಕ್ಕಳಿಗೆ ಶಿಕ್ಷಣ ನೀಡಬೇಕು. ಅವರ ಆದರ್ಶ, ನಡೆ-ನುಡಿಗಳನ್ನು ಅನುಸರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, ಇಂದು ನಾವೆಲ್ಲರೂ ಅನುಭವಿಸುತ್ತಿರುವ ಸಮಾನತೆಯ ಹಕ್ಕು ಅಂಬೇಡ್ಕರರ ಸಂವಿಧಾನದ ಫಲ. ಎಲ್ಲ ದಲಿತ ಸಂಘಟನೆಗಳು ಅಂಬೇಡ್ಕರ್ ಅವರು ನಡೆದ ದಾರಿಯಲ್ಲಿ ನಡೆಯಬೇಕು. ನಮ್ಮೆಲ್ಲರ ಭವಿಷ್ಯ ನಮ್ಮ ನಡವಳಿಕೆ ಮೇಲಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಎಂದರು.
ಏ.೮ರಿಂದ ೧೪ರವರೆಗೆ ನಡೆದ ವಿವಿಧ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.
ಸಂಗಪಾಲ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ಅಶೋಕ ಅಲ್ಲಾಪೂರ, ನಗರ ಪ್ರಾಽಕಾರ ಅಧ್ಯಕ್ಷ ಹಣಮಂತ ಸುಣಗಾರ, ಸಿದ್ದು ಬುಳ್ಳಾ, ಶಾಂತವೀರ ಬಿರಾದಾರ, ರಾಜಣ್ಣ ನಾರಾಯಣಕರ, ಯಮನಪ್ಪ, ತಾಪಂ ಇಒ ರಾಮು ಅಗ್ನಿ, ಸಾಯಬಣ್ಣ ಪುರದಾಳ ಇತರರಿದ್ದರು.
ಸಿಂದಗಿ ನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಶರಣಪ್ಪ ಸುಣಗಾರ ಉದ್ಘಾಟಿಸಿದರು. ಸಂಗಪಾಲ ಬಂತೇಜಿ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ರಮೇಶ ಭೂಸನೂರ, ಶಾಂತವೀರ ಬಿರಾದಾರ ಇತರರಿದ್ದರು.