ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ

ತಾಳಿಕೋಟೆಯ ಬಾವೂರ ಗ್ರಾಮದಲ್ಲಿ ಹಮ್ಮಿಕೊಂಡ ಅಂಜುಮನ್ ಇಸ್ಲಾಂ ಟ್ರಸ್ಟ್ ಉದ್ಘಾಟನೆ ಹಾಗೂ ಸಮುದಾಯ ಭವನ ಅಡಿಗಲ್ಲು ಸಮಾರಂಭವನ್ನು ಪÀಲ್ಲವಿ ನಾಡಗೌಡ ಉದ್ಘಾಟಿಸಿದರು.
ತಾಳಿಕೋಟೆಯ ಬಾವೂರ ಗ್ರಾಮದಲ್ಲಿ ಹಮ್ಮಿಕೊಂಡ ಅಂಜುಮನ್ ಇಸ್ಲಾಂ ಟ್ರಸ್ಟ್ ಉದ್ಘಾಟನೆ ಹಾಗೂ ಸಮುದಾಯ ಭವನ ಅಡಿಗಲ್ಲು ಸಮಾರಂಭವನ್ನು ಪÀಲ್ಲವಿ ನಾಡಗೌಡ ಉದ್ಘಾಟಿಸಿದರು.
Published on
ತಾಳಿಕೋಟೆ : ಸಮಾಜದಲ್ಲಿರುವ ಕೆಡುಕುಗಳನ್ನು ನಿರ್ಮೂಲನೆಗೊಳಿಸಿ, ಎಲ್ಲ ವರ್ಗದ ಜನರ ಮಧ್ಯೆ ಪ್ರೀತಿ ವಿಶ್ವಾಸ ಹಾಗೂ ಭ್ರಾತೃತ್ವ ಬೆಳೆಸುವುದು ಸಂಘಟನೆಗಳ ಸಾಮಾಜಿಕ ಜವಾಬ್ದಾರಿ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಹೇಳಿದರು.
ತಾಲೂಕಿನ ಬಾವೂರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಅಂಜುಮನ್ ಇಸ್ಲಾಂ ಟ್ರಸ್ಟ್ ಉದ್ಘಾಟನೆ ಹಾಗೂ ಸಮುದಾಯ ಭವನ ಅಡಿಗಲ್ಲು ಸಮಾರಂಭವನ್ನು ಜ್ಯೋತಿ ಬೆಳೆಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಹೆತ್ತವರು ತಮ್ಮ ಮಕ್ಕಳ ಶಿಕ್ಷಣ ಹಾಗೂ ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕು. ಗ್ರಾಮದಲ್ಲಿ ಯುವಕರು ಕುಡಿತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಟ್ರಸ್ಟ್ ಸದಸ್ಯರು ಮಾಡಬೇಕು. ಗ್ರಾಮದಲ್ಲಿ ಶಾಂತಿ ಕದಡದಂತೆ ನೋಡಿಕೊಂಡು ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಬದುಕಲು ಪ್ರಯತ್ನಿಸಿ ಎಂದರು.
ಸಮುದಾಯ ಭವನ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಅಸ್ಕಿ -Ëಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ (ಕೊಣ್ಣೂರ) ಮಾತನಾಡಿ, ಬಾವೂರು ಶಾಂತಿ ಸೌಹಾರ್ದತೆಗೆ ಹೆಸರಾದ ಗ್ರಾಮ. ಟ್ರಸ್ಟ್ನ ಸದಸ್ಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮವನ್ನು ಜಿಲ್ಲೆಯ ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸಿ. ಟ್ರಸ್ಟ್ನ ರಚನೆಯೊಂದಿಗೆ ಎಲ್ಲರೂ ಸಹಭಾಗಿತ್ವದಲ್ಲಿ ಸಮಾಜಮುಖಿ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ. ಸಮುದಾಯ ಭವನದ ನಿರ್ಮಾಣಕ್ಕೆ ಫೌಂಡೇಶನ್ ವತಿಯಿಂದ ಸುಮಾರು 200 ಚೀಲ ಸಿಮೆಂಟ್ ಉಚಿತವಾಗಿ ಒದಗಿಸುವುದಾಗಿ ಘೋಷಿಸಿದರು.
ಗ್ರಾಮದ ಗಣ್ಯರಾದ ಎಚ್.ಎಸ್. ಪಾಟೀಲ ಮಾತನಾಡಿದರು. ಶಾಂತಗೌಡ ಪಾಟೀಲ, ನಿಂಗನಗೌಡ ಬಿರಾದಾರ, ಮಲ್ಲನಗೌಡ ಬಳಗಾನೂರ, ಬಾಪ್ ಢವಳಗಿ, ರೆಹಮಾನ್‌ಸಾಬ ಅವಟಿ, ಆಸೀಫ್ ತಾರಘರ, ಟ್ರಸ್ಟ್ ಅಧ್ಯಕ್ಷ ಬಸೀರ ಅಹ್ಮದ್ ಕಾಳಗಿ, ಉಪಾಧ್ಯಕ್ಷ ಬಸೀರ ಅಹ್ಮದ್ ಕಮತಗಿ, ಪ್ರಧಾನ ಕಾರ್ಯದರ್ಶಿ ಲಾಲಸಾಬ ನಿಡಗುಂದಿ, ಸಹ ಕಾರ್ಯದರ್ಶಿ ಮಹೆಬೂಬ ಕಮತಗಿ, ಖಜಾಂಚಿ ರಾಜಣ್ಣ ನಿಡಗುಂದಿ, ಸದಸ್ಯ ಇಬ್ರಾಹಿಂ ನಿಡಗುಂದಿ, ದಾವಲಸಾಬ ಕಾಳಗಿ, ಹಸನ್ ಖಾದ್ರಿ, ಬಂದೇನವಾಜ್ ನಿಡಗುಂದಿ, ಮುಸ್ತಫಾ ನಿಡಗುಂದಿ, ಹುಸೇನ್ ಜಮಾದಾರ, ನಬಿಸಾಬ ಕಮತಗಿ, ಸಾಽÃಕ ನಿಡಗುಂದಿ, ಮೋದಿನಸಾಬ, ರಿಯಾಜ ಹಾಗೂ ಗ್ರಾಮಸ್ಥರು ಇದ್ದರು. ಶಿಕ್ಷಕಿ ಜಿ.ಜಿ. ತಾಳಿಕೋಟಿ ಸ್ವಾಗತಿಸಿ, ನಿರೂಪಿಸಿದರು.

ನೀರು, ಗಾಳಿಗೆ ಇಲ್ಲದ ಜಾತಿ ವ್ಯವಸ್ಥೆ ನಮಗ್ಯಾಕೆ ಬೇಕು. ಸಮಾಜಮುಖಿ ಕೆಲಸ ಮಾಡಲು ಬಾವೂರಿನ ಅಂಜುಮನ್ ಇಸ್ಲಾಂ ಟ್ರಸ್ಟ್ ಕಮಿಟಿಯನ್ನು ಉದ್ಘಾಟಿಸಿದ ಯುವಕರು ಎಲ್ಲರಿಗೂ ಮಾದರಿಯಾಗಿ ಬೆಳೆಯಲಿ. ಬಾವೂರಿನ ಹೆಸರು ರಾಜ್ಯಮಟ್ಟದಲ್ಲಿ ಗುರುತಿಸುವ ಕಾರ್ಯವಾಗಲಿ.

— | ಪಲ್ಲವಿ ನಾಡಗೌಡ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net