ಮನುಷ್ಯನ ಬುದ್ಧಿಮತ್ತೆಗೆ ಎ.ಐ. ಸಹಕಾರಿ

ವಿಜಯಪುರದ ವಿ.ಭ. ದರಬಾರ ಶಾಲೆಯಲ್ಲಿ ನೂತನವಾಗಿ ಎ.ಐ-ಎಂ.ಎಲ್ ಮತ್ತು ರೋಬೋಟಿಕ್ ಪ್ರಯೋಗಾಲಯವನ್ನು ಗಣ್ಯರು ಉದ್ಘಾಟಿಸಿದರು. ಕೆ.ಜಿ. ದೇಶಪಾಂಡೆ, ವಿಕಾಸ ದರಬಾರ, ಪಾರ್ಥ ದರಬಾರ ಮತ್ತಿತರರಿದ್ದಾರೆ.
ವಿಜಯಪುರದ ವಿ.ಭ. ದರಬಾರ ಶಾಲೆಯಲ್ಲಿ ನೂತನವಾಗಿ ಎ.ಐ-ಎಂ.ಎಲ್ ಮತ್ತು ರೋಬೋಟಿಕ್ ಪ್ರಯೋಗಾಲಯವನ್ನು ಗಣ್ಯರು ಉದ್ಘಾಟಿಸಿದರು. ಕೆ.ಜಿ. ದೇಶಪಾಂಡೆ, ವಿಕಾಸ ದರಬಾರ, ಪಾರ್ಥ ದರಬಾರ ಮತ್ತಿತರರಿದ್ದಾರೆ.
Published on
ವಿಜಯಪುರ : ಆಧುನಿಕ ಜಗತ್ತಿನಲ್ಲಿ ಮನುಷ್ಯನ ಬುದ್ಧಿಮತ್ತೆಯ ಎಲ್ಲ ಸಾಮರ್ಥ್ಯಗಳನ್ನು ಮರು ರಚಿಸಲು ಎ.ಐ. ಸಹಕಾರಿಯಾಗಿದೆ ಎಂದು ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಕೆ.ಜಿ. ದೇಶಪಾಂಡೆ ಹೇಳಿದರು.
ನಗರದ ವಿ.ಭ. ದರಬಾರ ಶಾಲೆಯಲ್ಲಿ ನೂತನವಾಗಿ ಎ.ಐ-ಎಂ.ಎಲ್. ಮತ್ತು ರೋಬೋಟಿಕ್ ಪ್ರಯೋಗಾಲಯವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ಹಂತದಿAದಲೇ ವಿದ್ಯಾರ್ಥಿಗಳಿಗೆ ಎಐ ವಿಷಯದ ಪರಿಕಲ್ಪನೆಯನ್ನು ನೀಡುವ ಮೂಲಕ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ಅವರನ್ನು ಸನ್ನದ್ಧಗೊಳಿಸಲು ವಿದ್ಯಾವರ್ಧಕ ಸಂಘ ಈ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ಆಡಳಿತ ಮಂಡಳಿ ಸದಸ್ಯರಾದ ವಿಕಾಸ ದರಬಾರ, ಆದಿತ್ಯ ದರಬಾರ, ಪಾರ್ಥ ದರಬಾರ ಭಾಗಿಯಾಗಿ, ನೂತನವಾಗಿ ಆರಂಭಗೊAಡ ಪ್ರಯೋಗಾಲಯದಲ್ಲಿ ದೊರೆಯಬಹುದಾದ ಎಲ್ಲ ಪರಿಣಾಮಕಾರಿ ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು.
ಸಂಘದ ಸಮನ್ವಯಾಽಕಾರಿ ಡಾ. ವಿ.ಬಿ. ಗ್ರಾಮ ಪುರೋಹಿತ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net