ಅಹ್ಮದ್‌ಗೆ ಸಚಿವ ಸಂಪುಟಕ್ಕೆ ಒತ್ತಾಯ

ನ್ಯಾಯವಾದಿ ಎಂ.ಬಿ. ಮಾಣಿಕ, ರಸೂಲ್ ಮಾಶ್ಯಾಳಕರ ಮಾತನಾಡಿದರು.  ಬಿಲಾಲ್ ಡಾಂಗೆ, ದಸ್ತಗೀರ ಗಾಲಿಬವಾಲೆ, ಶಕೀಲಾ ಗಾಲಿಬವಾಲೆ, ಸಾದಿಕಾ ಮಾಶಾಳಕರ, ಸಂಗೀತಾ ಹರಿಜನ್, ರಿಯಾಜ್ ಕೊರಬೋ, ಅಬ್ದುಲ್ ಚಂದನವಾಲೆ ಇತರರಿದ್ದರು.
ನ್ಯಾಯವಾದಿ ಎಂ.ಬಿ. ಮಾಣಿಕ, ರಸೂಲ್ ಮಾಶ್ಯಾಳಕರ ಮಾತನಾಡಿದರು. ಬಿಲಾಲ್ ಡಾಂಗೆ, ದಸ್ತಗೀರ ಗಾಲಿಬವಾಲೆ, ಶಕೀಲಾ ಗಾಲಿಬವಾಲೆ, ಸಾದಿಕಾ ಮಾಶಾಳಕರ, ಸಂಗೀತಾ ಹರಿಜನ್, ರಿಯಾಜ್ ಕೊರಬೋ, ಅಬ್ದುಲ್ ಚಂದನವಾಲೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿ ನೇತೃತ್ವ
  • ಹೈಕಮಾಂಡ್‌ಗೆ ಮನವಿ
ಇಂಡಿ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಅಥವಾ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಯುವ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಡಳಿತ ಸೌಧಕ್ಕೆ ತೆರಳಿ ಶಿರಸ್ತೆದಾರ ಎಸ್.ಆರ್. ಮುಜಗೊಂಡ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಪ್ರಾರಂಭಿಸಿ ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ , ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾವೀರ ವೃತ್ತಗಳ ಮುಖಾಂತರ ಆಡಳಿತ ಸೌಧದ ಆವರಣಕ್ಕೆ ತೆರಳಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ, ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿದರು.
ನಂತರ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಕಮಿಟಿ ಸಂಸ್ಥಾಪಕ ಅಧ್ಯಕ್ಷ ಬಿ.ಡಿ. ಇನಾಮದಾರ ಮಾತನಾಡಿ, ಸಚಿವರಾಗಿದ್ದ ಅವಧಿಯಲ್ಲಿ ಜಮೀರ್ ಅಹಮ್ಮದ್ ಖಾನ್ ಅವರು ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ವಸತಿ ಸಚಿವ ಇದ್ದ ಸಂದರ್ಭದಲ್ಲಿ 50 ಸಾವಿರಕ್ಕೂ ಹೆಚ್ಚು ವಸತಿ ಗೃಹಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಮನ್ನಣೆ ಗಳಿಸಿದ್ದಾರೆ. ಜಮೀರ್ ಅಹಮ್ಮದ್ ಖಾನ್ ಅವರಿಗೆ ಡಿಸಿಎಂ ಅಥವಾ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವ ಮೂಲಕ ಅವರ ಸೇವೆಯನ್ನು ರಾಜ್ಯ ಮಟ್ಟದಲ್ಲಿ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿ ಎಂ.ಬಿ. ಮಾಣಿಕ, ರಸೂಲ್ ಮಾಶ್ಯಾಳಕರ ಮಾತನಾಡಿದರು.
ಬಿಲಾಲ್ ಡಾಂಗೆ, ದಸ್ತಗೀರ ಗಾಲಿಬವಾಲೆ, ಶಕೀಲಾ ಗಾಲಿಬವಾಲೆ, ಸಾದಿಕಾ ಮಾಶಾಳಕರ, ಸಂಗೀತಾ ಹರಿಜನ್, ರಿಯಾಜ್ ಕೊರಬೋ, ಅಬ್ದುಲ್ ಚಂದನವಾಲೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net