ದೇವರಹಿಪ್ಪರಗಿ : ಆನ್‌ಲೈನ್ ಮಾರಾಟದಿಂದ ಔಷಧ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ವ್ಯಾಪಾರದ ಮೇಲೆ ಹೊಡೆತ ಬೀಳುತ್ತಿದೆ. ಆನ್‌ಲೈನ್ ಔಷಧ ಮಾರಾಟದ ಹಾಗೂ ಔಷಧ ವ್ಯಾಪಾರಸ್ಥರ ಹಕ್ಕುಗಳ ರಕ್ಷಣೆ ಮತ್ತು ವ್ಯವಹಾರದ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕಾಶೀನಾಥ ಸಾಲಕ್ಕಿ ಹೇಳಿದರು.
ಪಟ್ಟಣದ ಔಷಧ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಬುಧವಾರ ಆನ್‌ಲೈನ್ ಔಷಧ ಮಾರಾಟ ಮತ್ತು ಇ-ಫಾರ್ಮಸಿ ನೀತಿ ವಿರೋಽಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ ನೀಡಿರುವ ದೇಶವ್ಯಾಪಿ ಬಂದ್‌ಗೆ ಪಟ್ಟಣದ ಔಷಧ ವ್ಯಾಪಾರಸ್ಥರ ಸಂಘ ಬೆಂಬಲ ವ್ಯಕ್ತ ಪಡಿಸಿ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಹಲವಾರು ವರ್ಷಗಳಿಂದ ಬೇಡಿಕೆಗಳನ್ನು ಇಟ್ಟುಕೊಂಡು ಬಂದರೂ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಮೀನಮೇಷ ಎಣಿಸುತ್ತಿದೆ. ಅದಕ್ಕಾಗಿ ಇಂದು ದೇಶವ್ಯಾಪಿ ಔಷಧ ವ್ಯಾಪಾರಸ್ಥರು ಬಂದ್ ಮಾಡುವ ಮೂಲಕ ವಿರೋಧ ವ್ಯಕ್ತ ಪಡಿಸಿದ್ದೆವೆ ಎಂದರು.
ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ನಿಂಗೂ ಹಡಗಲಿ, ಶಿವಾನಂದ ಕೋರಿ, ಸದಾನಂದ ಮಣ್ಣೂರ, ರಾಜು ವಾಲಿಕಾರ, ಜಗದೀಶ್ ಮಣ್ಣೂರ, ಬಸವರಾಜ್ ಚೌಕಿಮಠ, ಮಲ್ಲನಗೌಡ ಬಿರಾದಾರ, ಮುದಸ್ಸರ್ ಕಮತಗಿ, ಮಂಜುನಾಥ್ ಬಿಂಗೊಳ್ಳಿ, ಮೈನುದ್ದಿನ ಮುಲ್ಲಾ, ಜುಬೇರ್ ಮನಿಯಾರ, ರಾಕೇಶ ಅಗಸರ, ಮಹಾಂತೇಶ್ ಯಾಳಗಿ, ಬಿಲಾಲ ಪಾನಪರೋಷ. ಬಸವರಾಜ್ ಬಿಸನಾಳ, ಯಶವಂತ್ ಚೌಹಾಣ, ಬಸವರಾಜ ದುತ್ತರಗಾವಿ, ಅಪ್ಪು ಕೋರಿ ಸೇರಿ ಔಷಧ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.