ಬಸವಣ್ಣನವರ ಕಾಲದ ಶಿವಶರಣರ ತತ್ವಾದರ್ಶ ಅಳವಡಿಸಿಕೊಳ್ಳಿ

 ವಿಜಯಪುರದ ವೀರಶೈವ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಡಾ. ಸೋಮಶೇಖರ ವಾಲಿ ಜನಪದರು ಕಂಡ ಶಿವಶರಣರು ವಿಷಯದ ಕುರಿತು ಉಪನ್ಯಾಸ ನೀಡಿದರು. ಮಹಾದೇವ ಹಾಲಳ್ಳಿ, ವಿ.ಸಿ. ನಾಗಠಾಣ, ಸಹದೇವ ನಾಡಗೌಡ, ಎಸ್.ಎನ್. ಶಿವಣಗಿ, ಮ.ಗು. ಯಾದವಾಡ, ಎಸ್.ಪಿ. ಮುಧೋಳ ಮತ್ತಿತರರಿದ್ದಾರೆ.
ವಿಜಯಪುರದ ವೀರಶೈವ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಡಾ. ಸೋಮಶೇಖರ ವಾಲಿ ಜನಪದರು ಕಂಡ ಶಿವಶರಣರು ವಿಷಯದ ಕುರಿತು ಉಪನ್ಯಾಸ ನೀಡಿದರು. ಮಹಾದೇವ ಹಾಲಳ್ಳಿ, ವಿ.ಸಿ. ನಾಗಠಾಣ, ಸಹದೇವ ನಾಡಗೌಡ, ಎಸ್.ಎನ್. ಶಿವಣಗಿ, ಮ.ಗು. ಯಾದವಾಡ, ಎಸ್.ಪಿ. ಮುಧೋಳ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಡಾ. ಸೋಮಶೇಖರ ವಾಲಿ ಅಭಿಮತ
  • ಮಾಸಿಕ ಸಭೆ
  • ವಿಶೇಷ ಉಪನ್ಯಾಸ
ವಿಜಯಪುರ: ಶರಣರ ನೆನೆದರೆ ಸರಗಿಯ ಇಟ್ಟಾಂಗ, ಅರಳ ಮಲ್ಲಿಗೆ ಹೂವು ಮುಡಿದಾಂಗ, ಕಲ್ಯಾಣದ ಶರಣರ ನೆನಯೋ ಎಲೆ ಮನವೆ ಎಂದು ನಮ್ಮ ನಾಡಿನ ಜನಪದರು ತಮ್ಮ ಸಹಜ ಸುಂದರ ಆಡು ಭಾಷೆಯಲ್ಲಿ ಬಸವಣ್ಣನವರ ಕಾಲದ ಶಿವಶರಣರನ್ನು ಸ್ಮರಿಸುತ್ತಾ ಬಂದಿದ್ದಾರೆ ಎಂದು ಸಾಹಿತಿ ಡಾ. ಸೋಮಶೇಖರ ವಾಲಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಭವನದಲ್ಲಿ ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ ಉತ್ತರ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಜನಪದರು ಕಂಡ ಶಿವಶರಣರು ವಿಷಯದ ಕುರಿತು ಉಪನ್ಯಾಸ ನೀಡಿದರು.
ನೂರಾರು ದೇವರಲ್ಲಿ ಯಾರ‌್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂ ತಾಯಿ ಎದ್ದೊಂದು ಗಳಿಗೆ ನೆನೆದೇನ ಎಂದು ಭೂತಾಯಿಗೆ ಜನಪದರು ನಮಿಸಿದ್ದಾರೆ. ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯಲಿ, ಕಲ್ಯಾಣದಣ್ಣ ಬಸವಣ್ಣ ಇರುವಾಗ ಕಲ್ಲಿಗ್ಯಾಕ ಕೈ ಮುಗಿಯಲೆ ಎಂದು ಬಸವಣ್ಣನವರ ಶರಣರ ತತ್ವಗಳನ್ನು ಗೌರವಿಸಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಪ್ರೊಬಸ್ ಕ್ಲಬ್ ಉತ್ತರದ ಆಯುಕ್ತ ಮಹಾದೇವ ಹಾಲಳ್ಳಿ ಮಾತನಾಡಿ, ಜಾನಪದ ಗೀತೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಡೆಯಬೇಕಿದೆ ಎಂದರು.
ಮಹಿಳಾ ದಿನಾಚರಣೆ ನಿಮಿತ್ತ ಉಪಸ್ಥಿತಿ ವಹಿಸಿದ್ದ ಮಹಿಳಾ ಸದಸ್ಯರಿಗೂ ಪುಷ್ಪ ನೀಡಿ, ಗೌರವಿಸಲಾಯಿತು. ಎಸ್.ಆರ್. ಮಾನಕರ ಮತ್ತು ಶಂಕರ ತದ್ದೆವಾಡಿ ಪ್ರಾರ್ಥಿಸಿದರು. ಸುಭಾಷ ಬೆಟಗೇರಿ ಸ್ವಾಗತಿಸಿ ಪರಿಚಯಿಸಿದರು. ಎಸ್.ಸಿ. ಹಿರೇಮಠ ನಿರೂಪಿಸಿದರು. ಜಗದೀಶ ಮೋಟಗಿ ವಂದಿಸಿದರು.
ವಿ.ಸಿ. ನಾಗಠಾಣ, ಸಹದೇವ ನಾಡಗೌಡ, ಎಸ್.ಎನ್. ಶಿವಣಗಿ, ಮ.ಗು. ಯಾದವಾಡ, ಎಸ್.ಪಿ. ಮುಧೋಳ, ಬಸವರಾಜ ಹಂಗರಗಿ, ಈರಣ್ಣ ಚಿಮ್ಮಲಗಿ, ವಿ.ಡಿ. ಐಹೊಳ್ಳಿ, ಆರ್.ಜಿ. ಬ್ಯಾಕೋಡ, ಬಸವರಾಜ ಮೋದಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net