ಅಣ್ಣಪ್ಪ ಪೂಜಾರಿ ಮೇಲೆ ಕ್ರಮಕ್ಕೆ ಆಗ್ರಹ

ಸರ್ಕಾರಿ ನೌಕರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ರೌಡಿ ಶೀಟರ್ ಅಣ್ಣಪ್ಪ ಪೂಜÁರಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಸರ್ಕಾರಿ ನೌಕರ ಸಂಘ ಹಾಗೂ ಶಿಕ್ಷಕರ ಸಂಘದ ಸದಸ್ಯರು ತಹಸೀಲ್ದಾರ್ ಸಂಜಯ ಇಂಗಳೆ ಮೂಲಕ ಜಿ¯್ಲÁಽಕಾರಿಗಳಿಗೆ ಮನವಿ ಸಲ್ಲಿಸಿದರು. ಅನಿಲ ಸೊನ್ನಗಿ, ಬಸವಂತ ಉಮರಾಣಿ, ವಿಠ್ಠಲ ಕಾಂಬಳೆ ಮತ್ತಿತರರಿದ್ದರು.
ಸರ್ಕಾರಿ ನೌಕರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ರೌಡಿ ಶೀಟರ್ ಅಣ್ಣಪ್ಪ ಪೂಜÁರಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಸರ್ಕಾರಿ ನೌಕರ ಸಂಘ ಹಾಗೂ ಶಿಕ್ಷಕರ ಸಂಘದ ಸದಸ್ಯರು ತಹಸೀಲ್ದಾರ್ ಸಂಜಯ ಇಂಗಳೆ ಮೂಲಕ ಜಿ¯್ಲÁಽಕಾರಿಗಳಿಗೆ ಮನವಿ ಸಲ್ಲಿಸಿದರು. ಅನಿಲ ಸೊನ್ನಗಿ, ಬಸವಂತ ಉಮರಾಣಿ, ವಿಠ್ಠಲ ಕಾಂಬಳೆ ಮತ್ತಿತರರಿದ್ದರು.
Published on

ಚಡಚಣ:

ಸರ್ಕಾರಿ ನೌಕರರು ಹಾಗೂ ಶಾಲಾ ಶಿಕ್ಷಕರ ಕರ್ತವ್ಯಕ್ಕೆ ಪದೆ ಪದೇ ಅಡ್ಡಿಪಡಿಸುತ್ತಿರುವ ಕೆಆರ್‌ಎಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಡಚಣ ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಬುಧವಾರ ತಹಸೀಲ್ದಾರ್ ಸಂಜಯ ಇಂಗಳೆ ಮೂಲಕ ಜಿ¯್ಲÁಽಕಾರಿಗಳಿಗೆ ಮನವಿ ಸಲ್ಲಿಸಿದರು.

ಆಗಮಿಸಿ ನೌಕರರಿಗೆ ವಿನಾಕಾರಣ ಕರ್ತವ್ಯಕ್ಕೆ ಅಡ್ಡಿಪಡಿಸಿ, ನೌಕರರ ವಿಡಿಯೋ ಚಿತ್ರೀಕರಣ ಮಾಡುತ್ತಾನೆ.

ನೌಕರರಿಗೆ ಏಕವಚನದಲ್ಲಿ ಸಂಭೋದಿಸುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು ಅಲ್ಲದೆ, ನೌಕರರ, ಮಹಿಳಾ ನೌಕರರ ಮಾನಹಾನಿಯಾಗುವ ರೀತಿಯಲ್ಲಿ ವರ್ತಿಸುತ್ತಿz್ದÁನೆ. ಶಾಲೆಯಲ್ಲಿನ ಹೆಣ್ಣು ಮಕ್ಕಳ ವಿಡಿಯೋ ಮಾಡುತ್ತಾ ಆ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುತ್ತಿz್ದÁನೆ. ಅದರಿಂದ ಮಕ್ಕಳ ಪಾಲಕ ಪೋಷಕರಿಗೆ ಮಾನಸಿಕ ಹಿಂಸೆಯಾಗುತ್ತಿದೆ.
ವಿಡಿಯೋ ಚಿತ್ರೀಕರಣದಿಂದ ಮಕ್ಕಳ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ. ಈತನ ವರ್ತನೆಯಿಂದ ತಾಲೂಕಿನ ನೌಕರರಲ್ಲಿ ಭಯದ ವಾತಾವರಣ ಉಂಟಾಗಿ ನೌಕರರು ಕರ್ತವ್ಯ ನಿರ್ವಹಿಸುವಲ್ಲಿ ತೊಂದರೆ ಆಗುತ್ತಿದೆ. ಈ ಬಗ್ಗೆ ಜಿ¯್ಲÁಽಕಾರಿಗಳು ಗಮನ ಹರಿಸಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಸಂಜಯ ಇಂಗಳೆ, ಈ ಮನವಿಯನ್ನು ಜಿ¯್ಲÁಽಕಾರಿಗಳಿಗೂ, ಜಿ¯್ಲÁ ಪೊಲೀಸ್ ವರಿಷ್ಠಾಽಕಾರಿಗಳಿಗೂ ತಲುಪಿಸುವುದಾಗಿ ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಅನಿಲ ಸೊನ್ನಗಿ, ಕಾರ್ಯದರ್ಶಿ ಬಸವಂತ ಉಮರಾಣಿ, ಕಾರ್ಯದರ್ಶಿ ವಿಠ್ಠಲ ಕಾಂಬಳೆ, ಶಿಕ್ಷಕರ ಸೊಸೈಟಿ ಅಧ್ಯಕ್ಷ ಗುರು ಜೇವೂರ, ಉಪಾಧ್ಯಕ್ಷ ಇ-Áðನ ಮಕಾನದಾರ, ಸರ್ಕಾರಿ ನೌಕರ ಸಂಘದ ಸದಸ್ಯರಾದ ವಿಠ್ಠಲ ಕೊಳಿ, ಸಲೀಂ ಮಕಾನದಾರ, ಎನ್.ಪಿ.ಎಸ್ ನೌಕರ ಸಂಘದ ಅಧ್ಯಕ್ಷ ಎಸ್. ಡಿ.ಬಗಲಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net