ಎಲ್ಲಾ ರಂಗದಲ್ಲೂ ಮಹಿಳೆಯರ ಸಾಧನೆ

ವಿಜಯಪುರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಜಾಥಾಗೆ ರಾಮನಗೌಡ ಹಟ್ಟಿ ಚಾಲನೆ ನೀಡಿದರು. ಡಾ. ವಾಣಿ ಗಚ್ಚಿನಮಠ, ಉಜ್ವಲಾ ಸರನಾಡಗೌಡ, ಕಿರಣ ಓಸ್ವಾಲï ಮತ್ತಿತರರಿದ್ದಾರೆ.
ವಿಜಯಪುರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಜಾಥಾಗೆ ರಾಮನಗೌಡ ಹಟ್ಟಿ ಚಾಲನೆ ನೀಡಿದರು. ಡಾ. ವಾಣಿ ಗಚ್ಚಿನಮಠ, ಉಜ್ವಲಾ ಸರನಾಡಗೌಡ, ಕಿರಣ ಓಸ್ವಾಲï ಮತ್ತಿತರರಿದ್ದಾರೆ.
Published on
ಸ್ಥಳಿಯ ಜಿತೋ ಮಹಿಳಾ ವಿಭಾಗ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಕ್ಯಾನ್ಸರ್ ಜಾಗೃತಿಗಾಗಿ ಕಾರ್ ಜಾಥಾ ನಡೆಯಿತು.
ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಜಾಥಾವು ನಗರದ ಜೈನ ಮಂದಿರದಿಂದ ಆರಂಭಗೊಂಡು ಶ್ರೀ ಸಿದ್ಧೇಶ್ವರ ದೇವಸ್ಥಾನ, ಗಾಂಧಿ ವೃತ್ತ, ವಾಟರ್ ಟ್ಯಾಂಕ್, ಶಿವಾಜಿ ವೃತ್ತ ಸೇರಿ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಸೂರ್ತಿ ಸಭಾಂಗಣ ತಲುಪಿ ಸಂಪನ್ನಗೊಂಡಿತು. ಜಾಥಾ ಮೂಲಕ ಕ್ಯಾನ್ಸರ್ ರೋಗ ತಡೆಗಟ್ಟುವ ವಿಧಾನ, ರೋಗಕ್ಕೆ ಕಾರಣವಾಗುವ ಅಂಶಗಳ ಕುರಿತು ಭಿತ್ತಿ -ಫಲಕಗಳನ್ನು ಪ್ರದರ್ಶಿಸಲಾಯಿತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅರಕ್ಷಕ ರಾಮನಗೌಡ ಹಟ್ಟಿ ಜಾಥಾಗೆ ಚಾಲನೆ ನೀಡಿ, ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿಯೂ ಪ್ರಗತಿಯಲ್ಲಿದ್ದಾಳೆ. ವೈದ್ಯಕೀಯ, ವಿಜ್ಞಾನ, ಬಾಹ್ಯಾಕಾಶ ಸೇರಿ ಹೀಗೆ ಎಲ್ಲ ರಂಗದಲ್ಲಿಯೂ ಸಾಧನೆ ತೋರಿಸಿದ್ದಾರೆ. ಒಬ್ಬ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಸಮಾಜದಲ್ಲಿ ತನ್ನದೇ ಆದ ಮಹೋನ್ನತ ಪಾತ್ರ ನಿಭಾಯಿಸುವ ಪೂಜ್ಯಳು ಎಂದರಲ್ಲದೇ. ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ಕ್ಯಾನ್ಸರ್ ಕುರಿತು ಜಾಗೃತಿ ಜಾಥಾ ಆಯೋಜಿಸಿರುವುದು ಶ್ಲಾಘನಾರ್ಹ ಎಂದರು.
ವೈದ್ಯೆ ಡಾ. ವಾಣಿ ಗಚ್ಚಿನಮಠ ಮಾತನಾಡಿ, ಕ್ಯಾನ್ಸರ್ ಬಗ್ಗೆ ಭಯ ಬೇಡ, ಕ್ಯಾನ್ಸರ್ ಬಗ್ಗೆ ಅರಿವು ಅಗತ್ಯ, ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದರೆ ಸಂಪೂರ್ಣವಾಗಿ ಅದನ್ನು ಗುಣಪಡಿಸಬಹುದು ಎಂದು ಮಾಹಿತಿ ನೀಡಿದರು.
ಕಾನೂನು ತಜ್ಞ ಡಾ. ಉಜ್ವಲಾ ಸರನಾಡಗೌಡ, ಖ್ಯಾತ ವೈದ್ಯ ಡಾ. ಕಿರಣ ಓಸ್ವಾಲï ಮಾತನಾಡಿದರು. ಉದ್ಯಮಿ ಮಹಾವೀರ ಪಾರೇಖ, ಜಿತೋ ಚೇರಮನ್ ದೀರಿಶ ಧರ್ಮದರ್ಶಿ, ಡಾ. ಅಶ್ವಿನಿ ಯಂಡಿಗೇರಿ, ಸುಹಾಸಿನಿ ವಾರದ, ಜ್ಯೋತಿ ಕೊರಬು, ಅತುಲ್ ಥೊಬ್ಬಿ, ಕಿರಣ ಸಂಕಲೇಚಾ, ಸೋನಾಲಿ ಕೋಠಾರಿ, ಶರ್ಮಿಳಾ ಓಸ್ವಾಲï ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net