ಸಂಭ್ರಮದಿಂದ ನಡೆದ ನಂದಿ ಧ್ವಜಗಳ ಮೆರವಣಿಗೆ

ವಿಜಯಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಂದಿ ಧ್ವಜಗಳಿಗೆ ಪೂಜೆ ಸಲ್ಲಿಸಿದರು. ಗುರು ಗಚ್ಚಿನಮಠ ಮತ್ತು ಭಕ್ತಾದಿಗಳಿದ್ದಾರೆ.
ವಿಜಯಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಂದಿ ಧ್ವಜಗಳಿಗೆ ಪೂಜೆ ಸಲ್ಲಿಸಿದರು. ಗುರು ಗಚ್ಚಿನಮಠ ಮತ್ತು ಭಕ್ತಾದಿಗಳಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗಿ
  • ಭಕ್ತರಿಗೆ ಅನ್ನಪ್ರಸಾದ
  • ಗಮನಸೆಳೆದ ರಸಮಂಜರಿ, ನೃತ್ಯ ರೂಪಕಗಳು
ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬುಧವಾರ ನಂದಿ ಧ್ವಜಗಳಿಗೆ ಪೂಜೆ ಸಲ್ಲಿಸುವ ಮೂಲಕ ನಂದಿ ಧ್ವಜಗಳ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ನಗರ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜಗಳ ಭವ್ಯ ಮೆರವಣಿಗೆ ನಡೆಯಿತು. ದೇವಸ್ಥಾನ ಆವರಣದಲ್ಲಿ ಗುರು ಗಚ್ಚಿನಮಠ ಹಾಗೂ ಮಲ್ಲಿಕಾರ್ಜುನ ತೇಲಿ ಅವರಿಂದ ಅನ್ನಪ್ರಸಾದ ವಿತರಣೆ ನಡೆಯಿತು.
ರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ರಸಮಂಜರಿ ಕಾರ್ಯಕ್ರಮ, ಡಾ. ವೆಂಕಪ್ಪ ಸುಗತೆಕರ ತಂಡದಿಂದ ಗೊಂದಳಿ ಪದ, ದಿವ್ಯಾ ದಿಶಾ ತಂಡದಿಂದ ಸಾಂಸ್ಕೃತಿಕ ನೃತ್ಯ ರೂಪಕಗಳು, ವಿರೇಶ ವಾಲಿ ತಂಡದಿಂದ ಸಂಗೀತ ಮತ್ತು ಹಾಸ್ಯ ರಸಮಂಜರಿ ಹಾಗೂ ಸಂಗ್ಯಾ ಬಾಳ್ಯಾ ಬಯಲಾಟಗಳು ನಡೆದವು.
ಸಂಸ್ಥೆ ಉಪಾಧ್ಯಕ್ಷ ಸಂ.ಗು. ಸಜ್ಜನ, ಚೇರ್ಮನ್ ಬಸಯ್ಯಾ ಹಿರೇಮಠ, ಕಾರ್ಯದರ್ಶಿ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಮೇಯರ್ ಎಂ.ಎಸ್. ಕರಡಿ, ಪ್ರೇಮಾನಂದ ಬಿರಾದಾರ, ಎಸ್.ಎಂ. ಪಾಟೀಲ. ಅಮೃತ ತೋಸನಿವಾಲ್, ಪಾಂಡು ಸಾಹುಕಾರ ದೊಡಮನಿ, ಎಸ್.ಎಚ್. ನಾಡಗೌಡ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಎನ್.ಎಂ. ಗೋಲಾಯಿ, ಮಲಕಪ್ಪಣ್ಣ ಗಾಣಿಗೇರ, ವಿಜಯಕುಮಾರ ಡೋಣಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ನಾಗಪ್ಪ ಗುಗ್ಗರಿ, ಮಾದೇವ ಜಂಗಮಶೆಟ್ಟಿ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಅನೀಲ ಸಬರದ, ಸುರೇಶ ಇಟ್ಟಗಿ, ಸುನೀಲ ಉಕುಮನಾಳ, ರಾಹುಲ್ ಜಾಧವ, ವಿಠ್ಠಲ ಹೊಸಪೇಟಿ, ಕಿರಣ ಪಾಟೀಲ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net