ಮಹಿಳಾ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಫಲವಾಗಿ ದೇಶ ಉನ್ನತ ಮಟ್ಟದಲ್ಲಿದ್ದು, ಅಮೇರಿಕೆಯಲ್ಲಿ ಮಹಿಳೆಯರ ಉನ್ನತ ಶಿಕ್ಷಣ ಅಧ್ಯಯನ ಪ್ರಮಾಣ ಶೇ.34 ರಷ್ಟಿದ್ದರೆ, ನಮ್ಮ ಭಾರತದಲ್ಲಿ ಶೇ.43 ರಷ್ಟಿದೆ. ಭಾರತದಲ್ಲಿ ಅತೀ ಹೆಚ್ಚು ಅಂದರೆ ಶೇ.15 ರಷ್ಟು ಪ್ರಮಾಣದಲ್ಲಿ ಮಹಿಳಾ ಪೈಲೆಟ್‌ಗಳಿದ್ದಾರೆ, ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ವಹಿಸಿದ್ದೂ ಸಹ ಮಹಿಳೇಯರೇ. ಈ ರೀತಿ ಮಹಿಳೆ ಸಬಲೀಕರಣದ ದಾರಿಯಲ್ಲಿ ಶರವೇಗದಲ್ಲಿ ಸಾಗಿದ್ದಾಳೆ ಎಂದರು.