ಅಂಗವಿಕಲ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ, ಗುಣಮಟ್ಟದ ಶಿಕ್ಷಣ, ಚಿಕಿತ್ಸಾ ಸೇವೆಗಳು, ವೃತ್ತಿಪರ ತರಬೇತಿ ಮತ್ತು ಜೀವನ ಕೌಶಲಗಳನ್ನು ನೀಡುವ ಮೂಲಕ ಅವರನ್ನು ಆತ್ಮವಿಶ್ವಾಸಿ, ಸ್ವಾವಲಂಬಿ ಹಾಗೂ ಸಮಾಜದ ಗೌರವಾನ್ವಿತ ಸದಸ್ಯರನ್ನಾಗಿ ರೂಪಿಸುವ ಶಾಲೆಯನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದ್ದು, ಆ ಮಕ್ಕಳನ್ನು ಸಾಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಒಳಗೊಳ್ಳಿಸುವುದು, ಸಮಾನ ಅವಕಾಶ ಮತ್ತು ಗೌರವ ಒದಗಿಸುವುದು ಹಾಗೂ ಮಕ್ಕಳ ವೈಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾದ ಬೋಧನಾ ವಿಧಾನಗಳನ್ನು ಬಳಸುವ ಉದ್ದೇಶ ಹೊಂದಲಾಗಿದೆ ಎಂದರು.