ರಾಷ್ಟ್ರೀಯ ಶಿಶಿಕ್ಷು ಮೇಳದಲ್ಲಿ 350 ವಿದ್ಯಾರ್ಥಿಗಳ ಆಯ್ಕೆ

ವಿಜಯಪುರದ ಬಿಎಲ್‌ಡಿಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ರಾಷ್ಟ್ರೀಯ  ಶಿಶಿಕ್ಷು ಮೇಳವನ್ನು ಗಣ್ಯರು ಉದ್ಘಾಟಿಸಿದರು. ರಮೇಶ ದೇಸಾಯಿ, ರಂಗು ಮುಂಜೆ, ಶಗುಫ್ತಾ ಮಲ್ಲಾಡಕರ, ಎಸ್.ಎಂ. ನೆರಬೆಂಚಿ ಮತ್ತಿತರರಿದ್ದಾರೆ.
ವಿಜಯಪುರದ ಬಿಎಲ್‌ಡಿಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳವನ್ನು ಗಣ್ಯರು ಉದ್ಘಾಟಿಸಿದರು. ರಮೇಶ ದೇಸಾಯಿ, ರಂಗು ಮುಂಜೆ, ಶಗುಫ್ತಾ ಮಲ್ಲಾಡಕರ, ಎಸ್.ಎಂ. ನೆರಬೆಂಚಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಶಿಶಿಕ್ಷು
ವಿಜಯಪುರ: ನಗರದ ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು(ಅಂಪ್ರೆಂಟಿಸ್) ಮೇಳದಲ್ಲಿ 350ಕ್ಕಿಂತ ಅಧಿಕ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
ಸ್ಥಳೀಯ ಬಿಎಲ್‌ಡಿಇ ಕೈಗಾರಿಕೆ ತರಬೇತಿ ಸಂಸ್ಥೆ, ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಐಟಿಐ ಹಾಗೂ ಉದ್ಯೋಗ ವಿನಿಮಯ ಕಚೇರಿ ಹಾಗೂ ಕೌಶಲ್ಯಾಭಿವ್ಯದ್ಧಿ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೇಳವನ್ನು ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ರಮೇಶ ದೇಸಾಯಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಮೇಶ ದೇಸಾಯಿ, ವಿದ್ಯಾರ್ಥಿಗಳು ಕೇವಲ ಐಟಿಐ ತರಬೇತಿ ಪೂರ್ಣಗೊಳಿಸಿದರೆ ಸಾಲದು. ಕೈಗಾರಿಕೆಗಳಲ್ಲಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿ ಪಡೆದು ಸಂಪೂರ್ಣ ಕೌಶಲ ಹೊಂದಬೇಕೆಂದು ಸಲಹೆ ನೀಡಿದರು.
ಜಿಲ್ಲಾ ನೋಡಲ್ ಅಽಕಾರಿ ರಂಗು ಮುಂಜೆ, ಉಪ ಪ್ರಾಚಾರ್ಯೆ ಶಗುಫ್ತಾ ಮಲ್ಲಾಡಕರ, ಖಾಸಗಿ ಐಟಿಐಗಳ ಸಂಘದ ಅಧಕ್ಷ ಎಸ್.ಎಂ. ನೆರಬೆಂಚಿ, ಪ್ರಾಚಾರ್ಯೆ ಎಂ.ಡಿ. ಪಡಸಲಗಿ, ಎಚ್‌ಎಎಲ್ ಕಂಪನಿಯ ಮ್ಯಾನೇಜರ್ ಚಂದ್ರಲಾಂಬಿಕೆ, ಸಿಇಒ ಅನಿಲಕುಮಾರ ಮತ್ತಿತರರಿದ್ದರು.
ಜಿಲ್ಲಾಉದ್ಯೋಗ ವಿನಿಮಯ ಮತ್ತು ಕೌಶಲಾಭಿವೃದ್ಧಿ ಅಧಿಕಾರಿ ಮಹೇಶ ಮಾಲವಾಡೇಕರ ಅಧ್ಯಕ್ಷತೆ ವಹಿಸಿದ್ದರು. ಶಿಶಿಕ್ಷು ಮೇಳದ ನೋಡಲ್ ಅಧಿಕಾರಿ ಪೂಜಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಗಂಗಾಧರಮಠ ಸ್ವಾಗತಿಸಿದರು. ಆನಂದ ಪಾಟೀಲ ನಿರೂಪಿಸಿದರು. ನೂರಂದಯ್ಯ ಮಠಪತಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net