ಶೈಕ್ಷಣಿಕ ಪ್ರತಿಭೆಗಳ ಪ್ರೋತ್ಸಾಹಕ್ಕೆ 25 ಲಕ್ಷ ರೂ. ಠೇವಣಿ

ಸಿಂದಗಿ ನಗರದ ಮಾಂಗಲ್ಯ ಭವನದಲ್ಲಿ ಸಚಿವ ಲಕ್ಷ್ಮಣ ಸವದಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸದ ರಮೇಶ ಜಿಗಜಿಣಗಿ, ಶಾಸಕ ಎ.ಎಂ. ಮನಗೂಳಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ರಮೇಶ ಭೂಸನೂರ ಮತ್ತಿತರರಿದ್ದರು.
ಸಿಂದಗಿ ನಗರದ ಮಾಂಗಲ್ಯ ಭವನದಲ್ಲಿ ಸಚಿವ ಲಕ್ಷ್ಮಣ ಸವದಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸದ ರಮೇಶ ಜಿಗಜಿಣಗಿ, ಶಾಸಕ ಎ.ಎಂ. ಮನಗೂಳಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ರಮೇಶ ಭೂಸನೂರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಲಕ್ಷ್ಮಣ ಸವದಿ ಭರವಸೆ
  • ಸಾಧಕರ ಸನ್ಮಾನ, ಪ್ರತಿಭಾ ಪುರಸ್ಕಾರ
ಸಿಂದಗಿ:

ತಾಲೂಕಿನ ಗಾಣಿಗ ಸಮಾಜದ ಶೈಕ್ಷಣಿಕ ಪ್ರತಿಭೆಗಳ ಪ್ರೋತ್ಸಾಹಕ್ಕೆ ವೈಯಕ್ತಿಕವಾಗಿ 25 ಲಕ್ಷ ರೂ. ಠೇವಣಿ ಇಡುವ ಮೂಲಕ ಅದರ ಬಡ್ಡಿ ಹಣದಲ್ಲಿ ನಗದು ಪುರಸ್ಕಾರ ನೀಡುವುದಾಗಿ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು.

ನಗರದ ಮಾಂಗಲ್ಯ ಭವನದಲ್ಲಿ ಭಾನುವಾರ ನಡೆದ ಗಾಣಿಗ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ತಾಲೂಕಿನಲ್ಲಿ ಸಮಾಜದ ಕಲ್ಯಾಣ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯದ ಬೇಡಿಕೆಯನ್ನು ಶಾಸಕರೊಂದಿಗೆ ಚರ್ಚಿಸಿ, ಆದಷ್ಟು ಬೇಗ ನಿರ್ಧರಿಸಲಾಗುವುದು ಎಂದು ಹೇಳಿದರು.
ಸಮಾಜದ ಸಿರಿವಂತರು ಪಕ್ಷಾತೀತವಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನೆರವಾಗಬೇಕು. ಆಗಲೇ ಆ ಮಕ್ಕಳು ಭವಿಷ್ಯದಲ್ಲಿ ಗೌರವ, ಮನ್ನಣೆ ಸಾಧಿಸಲು ಸಾಧ್ಯವಾಗುತ್ತದೆ. ಆ ದಿಸೆಯಲ್ಲಿ ನಾವು ಮೊದಲು ಸ್ವಸಮಾಜವನ್ನು ಗೌರವಿಸಬೇಕು. ನನ್ನ ಮತಕ್ಷೇತ್ರದಲ್ಲಿ ಎಲ್ಲ ಜಾತಿ-ವರ್ಗಗಳ ಪ್ರತಿಭಾವಂತ 2342 ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿರುವೆ. ನಮ್ಮ ಹುಟ್ಟು-ಸಾವುಗಳ ನಡುವೆ ಸಮಾಜಕ್ಕೆ ಕೊಡುಗೆ ನೀಡುವ ಗುಣ ನಮ್ಮಲ್ಲಿರಬೇಕು ಎಂದರು.
ಸಂಸದ ರಮೇಶ ಜಿಗಜಿಣಗಿ, ಶಾಸಕ ಎ.ಎಂ. ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಆನಂದ ನ್ಯಾಮಗೌಡ, ವಿಧಾನಪರಿಷತ್ತಿನ ಮಾಜಿ ಸದಸ್ಯ ಬಿ.ಜಿ. ಪಾಟೀಲ, ಗಾಣಿಗ ಸಮಾಜದ ಅಧ್ಯಕ್ಷ ಸುರೇಶ ಸಜ್ಜನ, ಮಲ್ಲಿಕಾರ್ಜುನ ಲೋಣಿ, ದಯಾಸಾಗರ ಪಾಟೀಲ, ತಾಲೂಕಾಧ್ಯಕ್ಷ ವೀರುಪಾಕ್ಷ ಗಂಗನಳ್ಳಿ, ಬಸವರಾಜ ಶೀಲವಂತ, ಶ್ರೀಶೈಲಗೌಡ ಬಿರಾದಾರ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಡಾ.ಜಯಬಸವಕುಮಾರ ಮಹಾಸ್ವಾಮಿಗಳು, ಶಿವಶರಣೆ ನೀಲಮ್ಮ ತಾಯಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಬಸವಂತರಾಯ ಮಲಘಾಣ, ಸುರೇಶ ಅಜ್ಜಣ್ಣನವರ, ಸೌಮ್ಯಾ ಕಲ್ಲೂರ, ರಾಕೇಶ ಕಲ್ಲೂರ, ಶಿವಶರಣೆ ಸುಗಲಾದೇವಿ, ಗುರಣ್ಣಗೌಡ ಪಾಟೀಲ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net