ಬಬಲೇಶ್ವರ ತಾಲೂಕಿನ ಹಲಗಣಿಯ ವಿದ್ಯಾರ್ಥಿ ಸುದೀಪ ಬಸವರಾಜ ಬಾವಲತ್ತಿ ನೀಟ್‌ನಲ್ಲಿ 43481ನೇ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗೆ ಪ್ರಥಮ ವರ್ಷದ ಶುಲ್ಕ 1,54,150 ರೂ., ತಿಕೋಟಾದ ಸಚಿನ್ ಭೀಮಣ್ಣ ಮಾಳಿ ನೀಟ್‌ನಲ್ಲಿ 75173 ಸ್ಥಾನ ಪಡೆದು ಸದ್ಯ ಬಾಗಲಕೋಟೆಯ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದು, ಪ್ರಥಮ ವರ್ಷದ ಶುಲ್ಕ 1,56,621 ರೂ., ತಿಕೋಟಾ ತಾಲೂಕಿನ ಬಾಬಾನಗರದ ವಿದ್ಯಾರ್ಥಿನಿ ಪ್ರತೀಕ್ಷಾ ಶಿಂದೆ ನೀಟ್‌ನಲ್ಲಿ 175450 ಸ್ಥಾನ ಪಡೆದು ಮಂಗಳೂರಿನ ಕುಂತಿಕಾನಾ ಎ.ಜೆ. ಇನ್‌ಸ್ಟಿಟ್ಯೂಟ್ ಆ-ï ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿನಿಗೆ ಪ್ರಥಮ ವರ್ಷದ ಶುಲ್ಕ 2,51,571 ರೂ., ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದ ಸಂದೇಶ ನಂದ್ಯಾಳ ನೀಟ್‌ನಲ್ಲಿ ಪರೀಕ್ಷೆಯಲ್ಲಿ 162446 ಸ್ಥಾನ ಪಡೆದು ಹಾವೇರಿಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿಗೆ ಪ್ರಥಮ ವರ್ಷದ ಶುಲ್ಕ 1,48,400 ರೂ., ಚೆಕ್ ವಿತರಿಸಲಾಯಿತು.