

ವಿಜಯಪುರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಸಾವಿಗೀಡಾಗಿರುವ ಘಟನೆ ನಡೆದಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಸವನ ಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ನಿವಾಸಿ ಸಾಗರ ಚಲವಾದಿ (19) ಮೃತ ಯುವಕ. ಇಂದು ನಡೆದ ಗಣಿತ ಪರೀಕ್ಷೆ ಹಿನ್ನೆಲೆಯಲ್ಲಿ ಹೂವಿನ ಹಿಪ್ಪರಗಿಯಲ್ಲಿನ ವಿಶ್ವಚೇತನ ಪರೀಕ್ಷಾ ಕೇಂದ್ರದಲ್ಲಿ ಕಾಪಿ ಚೀಟಿ ಕೊಡಲು ಹೋದಾಗ ಘಟನೆ ನಡೆದಿದೆ.
ಪೊಲೀಸರಿಂದ ಆದ ಯದ್ವಾತದ್ವಾ ಹಲ್ಲೆಗೆ ಮೃತಪಟ್ಟನಾ? ಅಥವಾ ಹೃದಯಾಘಾತದಿಂದ ಯುವಕ ಮೃಯಪಟ್ಟನಾ? ಎಂಬ ಸಂಶಯ ಹೊಗೆಯಾಡತೊಡಗಿದೆ.
ಕಾಪಿ ಚೀಟಿ ಕೊಡಲು ಬಂದ ಯುವಕನನ್ನು ನೋಡಿ ಆತನನ್ನು ಹಿಡಿಯಲು ಪೊಲೀಸರು ಬೆನ್ನತ್ತಿದ್ದರು. ಈ ವೇಳೆ ಯುಕವನಿಗೆ ಕೊಟ್ಟ ಲಾಠಿ ಏಟಿನಿಂದ ಜೀವ ಹೋಯ್ತಾ? ಅಥವಾ ಪೊಲೀಸರು ಬೆನ್ನಟ್ಟಿದ್ದ ಗಾಬರಿಯಿಂದ ಹೃದಯಾಘಾತದಿಂದ ಮೃತಪಟ್ಟನಾ? ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದ್ದು, ತನಿಖಾ ನಂತರವಷ್ಟೇ ಸತ್ಯಾಂಶ ಹೊರಬರಲಿದೆ. (ದಿಗ್ವಿಜಯ ನ್ಯೂಸ್)