ತಾಯಿ ದೇಶದ ಸದೃಢ ಶಕ್ತಿ

VJP 18-2
Published on

ವಿಜಯಪುರ: ತಾಯಿ ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಸ್ತು, ಸಂಯಮದ ಜತೆಗೆ ಸೋಲು ಮತ್ತು ಟೀಕೆಗಳನ್ನು ಸಹಿಸುವುದನ್ನೂ ಕಲಿಸಿಕೊಡಬೇಕು. ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ಆ ಮನೆತನ ಖುಷಿಯಾಗಿರುತ್ತದೆ, ಅದರಂತೆ ದೇಶ ಖುಷಿಯಾಗಿರುತ್ತದೆ. ಅಂದರೆ ಇಡೀ ದೇಶದ ಖುಷಿ ತಾಯಿ ಮೇಲೆ ನಿಂತಿದೆ ಎಂದು ಶಿಕ್ಷಕ ಅಶೋಕ ಹಂಚಲಿ ಹೇಳಿದರು.

ನಗರದ ಕಸಾಪ ಸಭಾಭವನದಲ್ಲಿ ಭಾನುವಾರ ನಡೆದ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ತಾಯಿ’ ಎಂದರೆ ಒಂದು ಬೆಂಬಲವಿದ್ದಂತೆ, ಅದು ಜಗತ್ತಿನಲ್ಲಿನ ಅತಿ ಸದೃಢವಾದ ಬೆಂಬಲವಾಗಿದೆ. ನಮ್ಮೊಂದಿಗೆ ಯಾರೇ ಇರಲಿ, ಇಲ್ಲದಿರಲಿ, ತಾಯಿ ಮಮತೆಯೊಂದೇ ನಮಗೆ ಬದುಕಲು ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಜೀವನದಲ್ಲಿನ ಸೋಲು ಗೆಲುವನ್ನು ಸಮಾನವಾಗಿ ಕಾಣಲು ಈ ಆತ್ಮವಿಶ್ವಾಸವು ಸಹಕಾರಿಯಾಗಿರುತ್ತದೆ. ತಾಯಿಯ ಕೈಗಳು ನಮ್ಮ ತಲೆಯನ್ನು ನೇವರಿಸಲು, ರಮಿಸಲು ನಾವು ಪುನಃಶ್ಚೇತನಗೊಳ್ಳಲಾರಂಭಿಸುತ್ತೇವೆ. ಮತ್ತೆ ಯಾವುದೇ ರೀತಿಯ ಸವಾಲಿಗೂ ಮೈಯೊಡ್ಡಲು ಸಿದ್ಧರಾಗಿ ನಿಲ್ಲುತ್ತೇವೆ. ಅದುವೇ ತಾಯಿ ಎಂಬ ಪ್ರೀತಿ ಮತ್ತು ಬೆಂಬಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಯಿ ಭೂಮಿಗಿಂತ ಮಿಗಿಲು. ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಜೀವ ಮತ್ತೊಂದಿಲ್ಲ. ತಾಯಿಯ ಆ ಶ್ರಮ, ಆ ದುಡಿಮೆ, ಆ ಮಮತೆ, ಆ ಕಾಳಜಿ ಎಲ್ಲವನ್ನೂ ಪ್ರೀತಿಯಿಂದ ನಿಭಾಯಿಸಿಕೊಂಡು ಹೋಗುವ ಅಮ್ಮನ ಆ ಗುಣ, ಈ ಜಗತ್ತಿಗೆ ಒಂದು ಮಾದರಿಯ ಪಾಠ. ಎಷ್ಟೇ ಕೆಲಸ ಇದ್ದರೂ ಬೇಸರ ಮಾಡಿಕೊಳ್ಳದೆ, ಆಯಾಸ ಮಾಡಿಕೊಳ್ಳದೆ, ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಕಲೆ ತಾಯಿಯಿಂದಲೇ ಕಲಿಯಬೇಕು ಎಂದರು.

ಶಿಕ್ಷಕಿ ಎಲ್.ಎಲ್. ತೊರವಿ ಉದ್ಘಾಟನೆ ನೆರವೇರಿಸಿದರು. ಎನ್.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಧನಶೆಟ್ಟಿ, ಬಸವರಾಜ ಕುಂಬಾರ, ರಾಜಶೇಖರ ಉಮರಾಣಿ, ಮಾದೇವಿ ತೆಲಗಿ, ಶರಣಗೌಡ ಪಾಟೀಲ, ಸೋಮಶೇಖರ ಕುರ್ಲೆ, ಶಿವಲಿಂಗ ಕಿಣಗಿ, ರವಿ ಕಿತ್ತೂರ, ಸದಾಶಿವ ಪೂಜಾರಿ, ಮಹಾದೇವ ರಬಿನಾಳ, ಸುಮಂಗಲ ಪೂಜಾರಿ, ಭರತೇಶ ಕಲಗೊಂಡ, ಬಸವರಾಜ ಹಂಚಲಿ, ಎಸ್.ವೈ. ನಡುವಿನಕೆರಿ, ಸಿದ್ದನಗೌಡ ಕಾಸಿನಕುಂಟೆ, ಛಾಯಾ ಮಸಿಯವರ, ಭೌರಮ್ಮ ಮುಗಳೊಳ್ಳಿ, ಡಾ.ಶ್ಯಾಮಶ್ಯಾಅಲಿ ಮುಲ್ಲಾ, ಮುಸ್ತಾಕ್ ಮಲಗಾಣ, ರೇಣುಕಾ ಕಲಬುರ್ಗಿ, ಎಂ.ಐ. ಬೇಪಾರಿ, ಶಾಂತಾ ವಿಭೂತಿಮಠ, ಸುನಂದಾ ಕೋರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net