ವಿಜಯಪುರ ತಾಲೂಕುಮಟ್ಟದ ದಸರಾ ಕ್ರೀಡಾಕೂಟ

Vijayapura Taluk Level Dasara Sports Meet
Published on

ವಿಜಯಪುರ:ಹಾಕಿ ಮಾಂತ್ರಿಕ ಮೇಜರ್​ ಧ್ಯಾನ್​ಚಂದ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತಿದೆ. ಅಂತಹ ಮಹಾನ್​ ಕ್ರೀಡಾ ಸಾಧಕರ ಸಾಧನೆಯಿಂದ ಸ್ಫೂರ್ತಿ ಪಡೆಯಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಹೇಳಿದರು.

ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಪಟುಗಳು ರ್ನಿದಿಷ್ಟ ಗುರಿಯೊಂದಿಗೆ ಸತತ ಅಭ್ಯಾಸ, ತನ್ಮಯತೆ, ಕೌಶಲ್ಯ ಹಾಗೂ ಆ ದಿಸೆಯಲ್ಲಿನ ಪ್ರಯತ್ನ ಅಗತ್ಯವಾಗಿದೆ. ಕ್ರೀಡಾಪಟುಗಳು ತಮ್ಮ ಆಸಕ್ತಿಯ ಕ್ರೀಡೆಯಲ್ಲಿ ಬೆಳವಣಿಗೆ ಹೊಂದಲು ಇಂತಹ ಕ್ರೀಡಾಕೂಟಗಳ ಆಯೋಜನೆ ಅವರ ಆಸಕ್ತಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕಾ ಮಟ್ಟದ ಕ್ರೀಡಾಕೂಟ ಆಯೋಜಿಸಿದೆ ಎಂದು ವರು ಮಾಹಿತಿ ನೀಡಿದರು.

ರಾಷ್ಟ್ರ ಪ್ರಶಸ್ತಿ ಪುರಸತ ಜಾವಿದ ಜಮಾದಾರ ಮಾತನಾಡಿ, ಕ್ರೀಡೆಗಳಲ್ಲಿ ಸೋಲು&ಗೆಲವು ಸಾಮಾನ್ಯ. ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಿ ನಿರಂತರವಾಗಿ ಪರಿಶ್ರಮದಿಂದ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.

ಮುಖಂಡ ಅಡಿವೆಪ್ಪ ಸಾಲಗಲ್​ ಮಾತನಾಡಿದರು. ಹಾಕಿ ಮಾಂತ್ರಿಕ ಮೇಜರ್​ ಧ್ಯಾನ್​ಚಂದ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸಂಗೀತಾ ಮಠಪತಿ ನಿರೂಪಿಸಿದರು.

ವಾರ್ತಾ ಅಧಿಕಾರಿ ಅಮರೇಶ ದೊಡಮನಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ನಾಗರಾಜ ಲಂಬು, ಎಸ್​.ಕೆ. ಇನಾಮದಾರ, ಜಿ.ಎಂ. ಕೊಕರೆ, ಸಂಜಯ ಹಿರೆಮಠ, ಎಸ್​.ಎಸ್​. ಹಿರೇಮಠ, ಕೃಷ್ಣ ರಾಠೋಡ, ಚಂದ್ರಕಾಂತ ತಾರನಾಳ ಮತ್ತಿತರರಿದ್ದರು.

ವಿಜಯಪುರದ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಗಣ್ಯರು ಚಾಲನೆ ನೀಡಿದರು. ರಾಜಶೇಖರ ದೈವಾಡಿ, ಅಮರೇಶ ದೊಡಮನಿ, ಸಂತೋಷ ಭೋವಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net